ಭಾರತ ಹುಣ್ಣಿಮೆಯ ವಾರ್ಷಿಕೋತ್ಸವಕ್ಕೆ ಚಾಲನೆ

12kdr2
Published on

ಕಡೂರು: ಪಟ್ಟಣದ ಶ್ರೀ ರಾಯದುರ್ಗದ ರೇಣುಕಾಂಬ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆಯ 20ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎರಡು ದಿನ ನಡೆಯುವ ಧಾರ್ಮಿಕ ಪೂಜಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಬೆಳಗ್ಗೆ ಪಟ್ಟಣದ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀರೇಣುಕಾಂಬ ದೇವಿ ಉತ್ಸವ ಮೂರ್ತಿಯೊಂದಿಗೆ ಹೊಳೆ ಪೂಜೆ ನಡೆಸಲಾಯಿತು. ನಂತರ ದೇವಿ ಉತ್ಸವ ಮೂರ್ತಿ ಪಲ್ಲಕ್ಕಿಯನ್ನು ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಬುಧವಾರ ಭಾರತ್ ಹುಣ್ಣಿಮೆಯ ಅಂಗವಾಗಿ ಬೆಳಗ್ಗೆ ಅಮ್ಮನವರ ದೇವಾಲಯದಲ್ಲಿ ದೇವತಾ ಪ್ರಾರ್ಥನೆ, ವಿವಿಧ ಅಲಂಕಾರದೊಂದಿಗೆ ಸಂಕಲ್ಪ ಸೇವೆಗಳು, ಅಭಿಷೇಕ ಪೂಜಾ ಕೈಂಕರ್ಯಗಳು ನಡೆಯಲಿವೆ. ನಲ್ಲೂರಿ ಸುರೇಶ್, ಕೆ.ಜಿ.ರವಿ, ಕೆ.ಜಿ.ಲೋಕೇಶ್ವರ್, ಗೋಪಿ, ರಮೇಶ್, ಸತೀಶ್, ಕೆ.ಎಂ.ಶ್ರೀನಿವಾಸ್, ದುಶ್ಯಂತ ಕುಮಾರ್, ಕೆ.ಎಂ.ಸತೀಶ್‌ಕುಮಾರ್, ಜಯಣ್ಣ, ಬಾಬು, ಪೇಟೆ ಕುಮಾರ್, ಕೃಷ್ಣಮೂರ್ತಿ, ಪಂಗ್ಲಿ ಮಂಜುನಾಥ್, ಲೋಹಿತ್, ಮಧುಕರ ಮೋಹನ್ ಹಾಗೂ ನೂರಾರು ಮಹಿಳೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net