ವಾಲ್ವ ವರ್ಲ್ಡ್​ ಎಕ್ಸಪೋದಲ್ಲಿ ಭರತ್​ ಭಾಗಿ

2 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜರ್ಮನಿಯ ಡುಸೆಲ್​ ಡಾರ್ಫನಲ್ಲಿ ಡಿ. 3ರಿಂದ 5ರವರೆಗೆ ಏರ್ಪಡಿಸಿರುವ 13ನೇ ಅಂತರಾಷ್ಟ್ರೀಯ ವಾಲ್ವ ವರ್ಲ್ಡ್​ ಎಕ್ಸಪೋ-2024 ಹಾಗೂ ಕಾನ್ಫರೆನ್ಸ್​ನಲ್ಲಿ ಯುವ ಉದ್ಯಮಿ, ಅಶ್ವಾ ಎನರ್ಜಿ ಪ್ರೈ .ಲಿ. ಕಂಪನಿ ವ್ಯವಸ್ಥಾಪಕ ನಿರ್ದೇಶಕ, ವಾಲಟೆಕ್​ ಕಾರ್ಪೊರೇಶನ್​ ಕಂಪನಿ ಮ್ಯಾನೇಜಿಂಗ್​ ಪಾಲುದಾರ ಭರತ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ.

ಹು-ಧಾ ಕೈಗಾರಿಕಾ ಪ್ರದೇಶವನ್ನು ವಾಲ್ವ ಹಬ್​ ಎಂದು ಗುರುತಿಸಲಾಗಿದ್ದು, ವಾಲಟೆಕ್ ​ ಕಾರ್ಪೊರೇಶನ್​ ಕಂಪನಿ ಸಹ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಕಂಪನಿಯು ಎಲ್ಲ ರೀತಿಯ, ಎಲ್ಲ ಗಾತ್ರದ ಕೈಗಾರಿಕಾ ವಾಲ್ವ್ ಗಳನ್ನು ಒಳಗೊಂಡಂತೆ ಗೇಟ್​, ಗ್ಲೋಬ್​, ಸ್ವಿಂಗ್​ ಚೆಕ್​ ಉತ್ಪಾದಿಸುವಲ್ಲಿ ನಿರತವಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net