ಭಾರತಮಾತಾ ಪೂಜನ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಂಸ್ಕಾರ ಭಾರತಿ ಧಾರವಾಡ ಮಹಾನಗರ ವತಿಯಿಂದ ಫೆ. 3ರಂದು ಬೆಳಗ್ಗೆ 11 ಗಂಟೆಗೆ ಇಲ್ಲಿನ ವನಿತಾ ಸೇವಾ ಸಮಾಜದ ಸಭಾಂಗಣದಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸರ್ವೋದಯ ಮಹಿಳಾ ಆಸ್ಪತ್ರೆ ಮತ್ತು ಸಂತಾನ ಸಾಫಲ್ಯದ ವೈದ್ಯಕಿಯ ನಿರ್ದೇಶಕಿ ಡಾ. ಗೀತಾ ಉತ್ತೂರ ಹಾಗೂ ಸಂಸ್ಕಾರ ಭಾರತಿ ಉತ್ತರ ಪ್ರಾಂತ ಸಾಹಿತ್ಯ ಸಂಯೋಜಕ ಡಾ.ಬಿ.ಎಂ. ಶರಭೇಂದ್ರಸ್ವಾಮಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಸ್ಕಾರ ಭಾರತಿ ಧಾರವಾಡ ಮಹಾನಗರ ಅಧ್ಯಕ್ಷೆ ಡಾ. ಸೌಭಾಗ್ಯ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಉತ್ತರ ಪ್ರಾಂತ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಹಾಗೂ ವನಿತಾ ಸೇವಾ ಸಮಾಜದ ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net