ಭಾರತ್​ ಜೋಡೋ ಲಾಂಛನ ಅನಾವರಣ: ರಾಹುಲ್​ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಐಕ್ಯತೆ ಯಾತ್ರೆ

Congress
Published on

ಬೆಂಗಳೂರು: ಭಾರತ ಒಗ್ಗೂಡಿಸಲು ರಾಹುಲ್​ ಗಾಂಧಿ ನೇತೃತ್ವದಲ್ಲಿ ದೇಶದ ಐಕ್ಯತೆ ಯಾತ್ರೆ ನಡೆಯಲಿದೆ. ಈ ಪಾದಯಾತ್ರೆ ಜವಾಬ್ದಾರಿಯನ್ನು ಕಾಂಗ್ರೆಸ್​ ವಹಿಸಿದ್ದರೂ ಇದು ಪಾತೀತ ಯಾತ್ರೆಯಾಗಿರುತ್ತದೆ. ರಾಜ್ಯದಲ್ಲಿ 21 ದಿನ ಸಂಚರಿಸಲಿದೆ ಎಂದು ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​ ಹೇಳಿದರು.

ಪದ ಕಚೇರಿಯಲ್ಲಿ ಭಾನುವಾರ ಯಾತ್ರೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾತ್ರೆಯು ರಾಜ್ಯದಲ್ಲಿ ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಸಾಗಲಿದೆ. ಒಂದೊಂದು ದಿನ ಯಾರು ಪಾಲ್ಗೊಳ್ಳಬೇಕು, 21 ದಿನವೂ ಯಾರು ಇರಬೇಕೆಂದು ನಿಶ್ಚಯಿಸಲಾಗಿದೆ. ನೋಂದಣಿಗೂ ಅವಕಾಶ ಇರಲಿದೆ. ಬೆಳಗ್ಗೆ ಹನ್ನೊಂದರವರೆಗೆ ಜನರೊಂದಿಗೆ ಚರ್ಚೆ ನಡೆಸಿ, ನಂತರ ಪಾದಯಾತ್ರೆ ಸಂಜೆವರೆಗೂ ಸಾಗಲಿದೆ. ಕನ್ನಡದ ಲೇಪದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ವಿವರಿಸಿದರು.

ದೇಶದಲ್ಲಿ ಸಾಮಾಜಿಕ ಸಾಮರಸ್ಯ ಹದಗೆಡುತ್ತಿದ್ದು, ಕುವೆಂಪು ಅವರು ಹೇಳಿರುವಂತೆ ನಮ್ಮ ನಾಡು ಶಾಂತಿಯ ತೋಟ ಆಗಬೇಕು, ಪ್ರತಿ ಕುಟುಂಬವೂ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದು, ಅದರಲ್ಲೂ ಮಹಿಳೆಯರಿಗೆ ಆರ್ಥಿಕ, ಮಾನಸಿಕ ಶಕ್ತಿ ತುಂಬಬೇಕು. ನಿರುದ್ಯೋಗ ಪ್ರಮಾಣ ಹೆಚ್ಚಿದ್ದು ಯುವಕರಿಗೆ ಉದ್ಯೋಗ ಸಿಗಬೇಕು, ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರ ರಚನೆ ಆಗಬೇಕು, ರೈತರು ಹಾಗೂ ಕಾರ್ಮಿಕರ ಬದುಕು ಹಸನಾಗಬೇಕು. ಈ ಐದು ಉದ್ದೇಶದೊಂದಿದೆ ಎಲ್ಲ ವರ್ಗದವರನ್ನು ರಣೆ ಮಾಡಲು ಭಾರತ ಜೋಡೋ ಯಾತ್ರೆ ನಡೆಯಲಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲಿನ ಪಾದಯಾತ್ರೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂಬ ವಿಶ್ವಾಸವಿದೆ. ಈ ಪಾದಯಾತ್ರೆಯಲ್ಲಿ ಶಿಕರು, ನಿವೃತ್ತ ಅಧಿಕಾರಿಗಳು, ಸಂ ಸಂಸ್ಥೆಗಳು, ರೈತರು, ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗುವುದು. ರಾಜ್ಯದಲ್ಲಿ ನಿತ್ಯ 25 ಕಿ.ಮೀ ದೂರ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆಗೆ ಎಲ್ಲ ಜಿಲ್ಲೆಗಳ ಜನರು ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು.

ಬಿ.ಕೆ ಹರಿಪ್ರಸಾಸ್​ ಅವರಿಗೆ ರಾಜ್ಯದಲ್ಲಿನ ಪಾದಯಾತ್ರೆ ಉಸ್ತುವಾರಿ ನೀಡಲಾಗಿದ್ದು, ರಾಷ್ಟ್ರ ಮಟ್ಟದ ಸಮಿತಿಯಲ್ಲಿ ಕೆ.ಜೆ. ಜಾರ್ಜ್​, ಸಲೀಂ ಅಹ್ಮದ್​ ಇದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರ ಜತೆ ಸಭೆ ಮಾಡಿ ಯಾರೆಲ್ಲ 21 ದಿನ ನಡೆಯಬೇಕು ಎಂದು ಅಭಿಪ್ರಾಯ ಸಂಗ್ರಹಿಸಿ, ನಂತರ ಅವರನ್ನು ಆಯ್ಕೆ ಮಾಡಲಾಗುವುದು. ಎಲ್ಲರಿಗೂ ಅಧಿಕೃತ ವೆಬ್​ ಸೈಟ್​ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯ ಸಲೀಂ ಅಹ್ಮದ್​, ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ್​, ಸಂಸದ ಡಿ.ಕೆ.ಸುರೇಶ್​, ವಿಧಾನ ಪರಿಷತ್​ ವಿರೋಧ ಪದ ನಾಯಕ ಬಿ.ಕೆ.ಹರಿಪ್ರಸಾದ್​ ಹಾಜರಿದ್ದರು.

ಜಾತಿ, ಧರ್ಮ ಆಧಾರದಲ್ಲಿ ಸಮಾಜ ವಿಭಜನೆ

ದೇಶದಲ್ಲಿ ಸಾಮಾಜಿಕ ಸಮರಸ್ಯ ಹಾಳಾಗುತ್ತಿದ್ದು ದೇಶದ ಐಕ್ಯತೆಗೆ ಧಕ್ಕೆ ಬರುತ್ತಿದೆ. ಸಮಾಜದಲ್ಲಿ ಮತ್ತೆ ಸಮರ್ಥ್ಯ ಸ್ಥಾಪಿಸಲು ದೇಶದ ಐಕ್ಯತೆಯನ್ನು ರಸಲು, ಪ್ರಜಾಪ್ರಭುತ್ವ ಕಾಪಾಡಲು, ಸಂವಿಧಾನ ರಚಿಸಲು, ಹೆಚ್ಚಾಗುತ್ತಿರುವ ಧರ್ಮರಾಜಕಾರಣ ಹಾಗೂ ಅದರ ಮೂಲಕ ಸಮಾಜವನ್ನು ಒಡೆಯುವುದರ ವಿರುದ್ಧ ಈ ಪಾದಯಾತ್ರೆ ಯನ್ನು ಮಾಡಲಾಗುತ್ತಿದೆ ಎಂದು ವಿಧಾನಸಭೆ ವಿರೋಧ ಪದ ನಾಯಕ ಸಿದ್ದರಾಮಯ್ಯ ಹೇಳಿದರು. ದೇಶದಲ್ಲಿನ ಸಾಮಾಜಿಕ ಆರ್ಥಿಕ ಹಾಗೂ ರಾಜಕೀಯ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸಲಾಗಿತ್ತು. ಆದರೆ ಈಗ ಕೋಮುವಾದಿಗಳಿಗೆ ಅಧಿಕಾರ ಸಿಕ್ಕ ನಂತರ ಸಮಾಜ ಒಡಿಯುವಂತಹ, ಜಾತಿ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ದೇಶದ ಜನರನ್ನು ಒಗ್ಗೂಡಿಸಲು, ನಾವೆಲ್ಲರೂ ಭಾರತೀಯರು, ಮನುಷ್ಯರು ಎಂಬ ಭಾವನೆಗಳ ಮೂಲಕ ಜನರನ್ನು ಒಗ್ಗೂಡಿಸಲು ಈ ಪಾದಯಾತ್ರೆ ಮಾಡಲಾಗುತ್ತಿದೆ ಎಂದರು. ಇದರ ಜತೆಗೆ ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತರ ಸಮಸ್ಯೆ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲಾಗುವುದು.

ಮೈಸೂರಿನಲ್ಲಿ ಪಾದಯಾತ್ರೆಗೆ ದಸರಾ ಸವಾಲು

ಯಾತ್ರೆ ರಾಜ್ಯದಲ್ಲಿ ಸಾಗುವ ವೇಳೆ ಒಂದು ದೊಡ್ಡ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದ್ದು, ಬಳ್ಳಾರಿಯಲ್ಲಿ ಇದನ್ನು ನಡೆಸಬೇಕೆಂದು ಉದ್ದೇಶಿಸಲಾಗಿದೆ. ಮೈಸೂರಿನಲ್ಲಿ ಯಾತ್ರೆ ಸಾಗುವಾಗ ತಾಂತ್ರಿಕ ಸಮಸ್ಯೆ ಇದೆ. ಅಕ್ಟೋಬರ್​ 4&5 ರಂದು ದಸರಾ ಹಬ್ಬ ನಡೆಯಲಿದ್ದು, ಈ ದಿನ ಯಾವ ರೀತಿ ಮಾಡಬೇಕು ಎಂದು ದೆಹಲಿ ನಾಯಕರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್​ ಹೇಳಿದರು.

ಸಭೆಯ ಮುಖ್ಯಾಂಶ

* ಸೆ.7ರಂದು ಕನ್ಯಾಕುಮಾರಿಯ ವಿವೇಕಾನಂದ ಪ್ರತಿಮೆ, ತಿರುವಳ್ಳುವರ್​ ಪ್ರತಿಮೆ, ಗಾಂಧಿ, ಕಾಮರಾಜ್​ ಪ್ರತಿಮೆಗೆ ಗೌರವ ಸಲ್ಲಿಸಿ ಪಾದಯಾತ್ರೆ ಆರಂಭ.

* 19 ದಿನ ಕೇರಳ, 4 ದಿನ ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಲಾಗುವುದು. ಸೆ.29 ಅಥವಾ 30ರಂದು ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶ.

* ರಾಹುಲ್​ ಜತೆ 125 ಮಂದಿ ಭಾರತ ಯಾತ್ರಿಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 12 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3500 ಕಿ.ಮೀ ಹೆಜ್ಜೆ ಹಾಕುವರು.

* ರಾಜ್ಯದ 125 ನಾಯಕರು ರಾಜ್ಯ ಪಾದಯಾತ್ರಿಗಳಾಗಿ ರಾಜ್ಯದ 511 ಕಿ.ಮೀ ನಡೆಯಲಿದ್ದಾರೆ. ಇನ್ನು ನೆರೆ ರಾಜ್ಯದ 125 ನಾಯಕರಿಗೆ ಅತಿಥಿ ಯಾತ್ರಿಗಳಾಗಿ ಅವಕಾಶ ನೀಡಲಾಗುವುದು.

* ನಿತ್ಯ ಬೆಳಗ್ಗೆ 7 ಪಾದಯಾತ್ರೆ ಆರಂಭವಾಗಲಿದೆ. 11 ಗಂಟೆವರೆಗೂ ಹಳ್ಳಿ ಹಾಗೂ ಗ್ರಾಮಸ್ಥರ ಜತೆ ಪಾದಯಾತ್ರೆ ನಡೆಸಿ, ನಂತರ 11ರಿಂದ 2 ಗಂಟೆವರೆಗೂ ಸಂವಾದ ನಡೆಯುವುದು.

* ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರುವರೆಗೂ ಪಾದಯಾತ್ರೆ ಸಾಗಿ ತೆಲಂಗಾಣಕ್ಕೆ ಪ್ರವೇಶಿಸುವುದು.

ಅಧಿವೇಶನದಲ್ಲಿ 40 ಪರ್ಸೆಂಟ್​ ಹೋರಾಟ

ಬೆಂಗಳೂರು: ಸರ್ಕಾರದ ವಿರುದ್ಧ 40 ಪರ್ಸೆಂಟ್​ ಕಮಿಷನ್​ ವಿಷಯವನ್ನು ಯಾವುದೇ ಕಾರಣಕ್ಕೂ ತಣ್ಣಗಾಗಲು ಬಿಡಬಾರದು ಎಂದು ಕಾಂಗ್ರೆಸ್​ ಶಾಸಕಾಂಗ ಪದ ಸಭೆ ರ್ನಿಣಯಿಸಿದೆ. ಜತೆಗೆ ಭಾರತ್​ ಜೋಡೋದಿಂದ ಪಕ್ಕೆ ಅನುಕೂಲವಾಗಲಿದ್ದು, ಎಲ್ಲರೂ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಬೇಕೆಂದು ಸೂಚನೆ ಕೊಡಲಾಗಿದೆ. ಪದ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಧಾನಸಭೆ ವಿರೋಧ ಪದ ನಾಯಕ ಸಿದ್ದರಾಮಯ್ಯ ಸರ್ಕಾರದ ಆಗುಹೋಗುಗಳ ಬಗ್ಗೆ ವಿವರಿಸಿದರೆ, ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​ ಪದ ಚಟುವಟಿಕೆ ಬಗ್ಗೆ ವಿವರಣೆ ನೀಡಿದರು.

ಮುಖ್ಯವಾಗಿ ಜನರ ಬಾಯಲ್ಲಿ ಪ್ರತಿಯೊಂದು ಅವ್ಯವಸ್ಥೆ ವಿಷಯಕ್ಕೂ ನಲವತ್ತು ಪರ್ಸೆಂಟ್​ ತಳುಕು ಹಾಕಿಕೊಳ್ಳುತ್ತಿದೆ. ಹೀಗಾಗಿ ಜನರ ಮನಸ್ಸಿನಲ್ಲಿ ಇಳಿದಿರುವ ವಿಚಾರವನ್ನು ಮುಂದಿನ ಚುನಾವಣೆವರೆಗೂ ಮುಂದುವರಿಸಬೇಕು. ಪ್ರತಿ ಸಂದರ್ಭದಲ್ಲೂ ಈ ವಿಷಯ ಮಾತನಾಡಬೇಕು, ಹಿಂಜರಿಯ ಬಾರದೆಂಬ ಬಗ್ಗೆ ಪದ ನಾಯಕರು ಶಾಸಕರಿಗೆ ಸೂಚನೆ ನೀಡಿದರು ಎನ್ನಲಾಗಿದೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಹಾಗೂ ಸ್ವಾತಂತ್ರ$್ಯ ದಿನದ ನಡಿಗೆ ಬಗ್ಗೆ ಸುರ್ಜೆವಾಲ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ ಭಾರತ್​ ಜೋಡೋ ಕೂಡ ಇದೇ ರೀತಿ ಯಶಸ್ವಿಯಾಗಬೇಕೆಂದು ಕರೆ ನೀಡಿದರು. ಪಾದಯಾತ್ರೆ ಸೆಪ್ಟೆಂಬರ್​ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಲಿದ್ದು, 30ರಂದು ಗುಂಡ್ಲುಪೇಟೆಗೆ ಪ್ರವೇಶಿಸಲಿದೆ. ನಂತರ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರಿನಲ್ಲಿ ಸಾಗಲಿದೆ. ರಾಹುಲ್​ ಗಾಂಧಿ ಅವರು 150 ದಿನಗಳಲ್ಲಿ 3,500 ಕಿಲೋಮೀಟರ್​ ಪಾದಯಾತ್ರೆ ಮಾಡಲಿದ್ದಾರೆ. ಆ ಮೂಲಕ ಜನರಲ್ಲಿ ಹೊಸ ಭರವಸೆ, ದೇಶ ಅಭಿಮಾನ, ಭಾವನೆ ಮೂಡಿಸಲಿದ್ದಾರೆ. ಇದಕ್ಕೆ ನಾವೆಲ್ಲರೂ ಅವರ ಬೆನ್ನಿಗೆ ನಿಲ್ಲಬೇಕೆಂದು ಸುರ್ಜೇವಾಲ ಕೋರಿದರು.

ಪಾದಯಾತ್ರೆ ಸಾಗುವ ಹಾದಿಯಲ್ಲಿ ಸೂಕ್ತ ವ್ಯವಸ್ಥೆಗಳಾಗಬೇಕು, ಕಾರ್ಯಕರ್ತರು ಹಾಗೂ ಜನರನ್ನು ಕರೆತರುವ ಕೆಲಸ ವ್ಯವಸ್ಥಿತವಾಗಿ ಆಗಬೇಕು. ಊಟ, ವಸತಿ ಅಚ್ಚುಕಟ್ಟಾಗಿ ಆಗಬೇಕು. ಈ ಪಾದಯಾತ್ರೆ ರಾಜ್ಯದಲ್ಲಿ ಸಾಗುವಾಗ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪದ ಶಾಸಕರದ್ದಾಗಿರುತ್ತದೆ ಎಂದ ಅವರು, ಸರ್ಕಾರದ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಬೇಕು. ಅದನ್ನು ಜನರ ಮುಂದಿಡಬೇಕು. ಜನನಿತ್ಯ ಅನುಭವಿಸುವ ಬೆಲೆ ಏರಿಕೆ, ರಸ್ತೆ ಗುಂಡಿಯಂತಹ ವಿಚಾರವನ್ನು ಇಟ್ಟುಕೊಂಡು ಹೋರಾಟ ನಡೆಸಬೇಕೆಂದು ತಿಳಿಸಿದರು.

ಸೆಪ್ಟೆಂಬರ್​ 12ರಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದೆ, ಭ್ರಷ್ಟಾಚಾರ ಆರೋಪ ಪ್ರಕರಣ ಮುಂದಿಟ್ಟುಕೊಂಡು ಸರ್ಕಾರವನ್ನು ಪ್ರಶ್ನಿಸಿ, ಕಾನೂನು ಸುವ್ಯವಸ್ಥೆ ಹದಗೆಟ್ಟ ವಿಚಾರದಲ್ಲಿ ಆಡಳಿತ ಪದ ಕಾರ್ಯಕರ್ತರೇ ಸಿಟ್ಟಾಗಿದ್ದಾರೆ, ಇದನ್ನೂ ಪ್ರಸ್ತಾಪಿಸಿ ಸಚಿವರ ರಾಜೀನಾಮೆ ಕೇಳಿ ಎಂದು ಶಾಸಕರಿಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net