ಭಾರತ್ ಬ್ರಾೃಂಡ್ ಅಕ್ಕಿ ವಿತರಣೆ

ಭಾರತ್ ಬ್ರಾೃಂಡ್ ಅಕ್ಕಿ ವಿತರಣೆ
Published on

ಬೈಲಕುಪ್ಪೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ದಿನಗಳಲ್ಲಿ ಜನರಿಗೆ ಭಾರತ್ ಬ್ರಾೃಂಡ್ ಅಕ್ಕಿ ಜತೆಗೆ ಬೇಳೆಕಾಳನ್ನು ಕೂಡ ವಿತರಿಸಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಕೊಪ್ಪ ಬಿ.ಎಂ. ರಸ್ತೆ ಪಕ್ಕದಲ್ಲಿ ಭಾರತ್ ಬ್ರಾೃಂಡ್ ಅಕ್ಕಿ ವಿತರಿಸಿ ಮಾತನಾಡಿ, ಕೆ.ಜಿ.ಗೆ ರೂ. 29ರಂತೆ ಭಾರತ್ ಬ್ರಾೃಂಡ್ ಅಕ್ಕಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಕ್ಕಿಯ ಜತೆಗೆ ಬೇಳೆಕಾಳು ಕೂಡ ಜನತೆಗೆ ಕೈಗೆಟುಕುವ ದರದಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಹಾಗೂ ನನಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ವಿ.ರಾಜೇಂದ್ರ, ಲೋಕಸಭಾ ಚುನಾವಣಾ ಉಸ್ತುವಾರಿ ಎಂ.ಎಂ. ರಾಜೇಗೌಡ, ಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಮೇಗೌಡ, ಲೋಕಪಾಲಯ್ಯ, ಕಿರಣ್, ಚಂದ್ರು, ಬೆಮ್ಮತಿ ಚಂದ್ರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net