ಭಾರತ್ ಬೀಡಿ ಕಂಪನಿ ಹಕ್ಕೊತ್ತಾಯ ಚಳವಳಿ

New Project (13)
Published on

 ಬಂಟ್ವಾಳ: 2018ರಿಂದ 2024ರವರೆಗಿನ ಆರು ವರ್ಷಗಳ ಕನಿಷ್ಠ ಕೂಲಿ ಪಾವತಿಸುವಂತೆ ಹಾಗೂ 2024ರಿಂದ ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿಭತ್ತೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸಲು ಆಗ್ರಹಿಸಿ ಮಂಗಳವಾರ ಎಐಟಿಯುಸಿ ಮತ್ತು ಸಿಐಟಿಯು ಬಂಟ್ವಾಳ ತಾಲೂಕಿನ ಬೀಡಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಹಕ್ಕೊತ್ತಾಯ ಚಳವಳಿ ಬಿ.ಸಿ.ರೋಡಿನ ಭಾರತ್ ಬೀಡಿ ಕಂಪನಿ ಎದುರು ನಡೆಯಿತು.

ಎಐಟಿಯುಸಿ ಜಿಲ್ಲಾ ಕಾರ‌್ಯದರ್ಶಿ ಸೀತಾರಾಮ ಬೇರಿಂಜ ಚಳವಳಿಗೆ ಚಾಲನೆ ನೀಡಿದರು. ಸಿಐಟಿಯು ಜಿಲ್ಲಾ ಮುಖಂಡ ಜೆ.ಬಾಲಕೃಷ್ಣ ಶೆಟ್ಟಿ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್, ಎಐಟಿಯುಸಿನ ಮುಂದಾಳು ವಿ.ಕುಕ್ಯಾನ್, ಜಿಲ್ಲಾ ಸಹ ಕಾರ‌್ಯದರ್ಶಿ ಕರುಣಾಕರ ಮಾರಿಪಳ್ಳ, ಉಮಾವತಿ ಕುರ್ನಾಡು, ಹರ್ಷಿತ್, ಎಂ.ಬಿ.ಭಾಸ್ಕರ, ಶಮಿತಾ, ಭಾರತಿ ಪ್ರಶಾಂತ್, ಕೆ.ಜಯಂತ, ಮೋಹನ ಅರಳ, ಸರೋಜಿನಿ, ಯೋಗಿನಿ, ಕುಸುಮಾ ಕಳ್ಳಿಗೆ, ಮೋಹಿನಿ, ಸಿಐಟಿಯುನ ಲೋಲಾಕ್ಷಿ, ಉದಯ ಕುಮಾರ್, ಜಯಂತ. ನಾರಾಯಣ, ಎಐಟಿಯುಸಿ ಜಿಲ್ಲಾ ಸಹಕಾರ‌್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್, ಸಿಐಟಿಯುನ ಉದಯ ಕುಮಾರ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net