ಲೋಕ ಕಲ್ಯಾಣಕ್ಕಾಗಿ ಮಹಾರುದ್ರ ಹೋಮ

BRM RUDRA HOMA PRAVACHANA 23 (1)
Published on

ಭರಮಸಾಗರ: ಇಲ್ಲಿನ ಬಿದರಿಕೆರೆ ರಸ್ತೆಯ ಪುರಾತನ ಭವಾನಿ ನೀಲಕಂಠೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಲೋಕ ಕಲ್ಯಾಣಕ್ಕಾಗಿ ಮಹಾರುದ್ರ ಹೋಮ ನೆರವೇರಿತು.

ಇದರ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಷ್ಠಾವಧಾನ ಸೇವೆ, ಮಹಾಶಿವರಾತ್ರಿ ಧಾರ್ಮಿಕ ಕಾರ್ಯಗಳು ಜರುಗಿದವು.

ಬೆಂಗಳೂರಿನ ಪುರಂದರಾಚಾರ್ಯ ಹಯಗ್ರೀವ, ಡಾ.ಎ.ಎಸ್.ವೆಂಕಟಗಿರೀಶಾಚಾರ್ಯ, ಹೊಸಪೇಟೆ ಫಣೀಂದ್ರಾಚಾರ್ಯ ಇವರು, ರುದ್ರದೇವರ ಕುರಿತು ಉಪನ್ಯಾಸ ನೀಡಿದರು.

ಪೂರ್ಣಾಹುತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ಎಚ್.ಆರ್.ಕೃಷ್ಣಾ ಜೋಯಿಸ್ ಸಾನ್ನಿಧ್ಯ ವಹಿಸಿದ್ದರು. ನೀಲಕಂಠ ಜೋಯಿಸ್, ಪಾಂಡುರಂಗ ಜೋಯಿಸ್, ಗೋಪಾಲಕೃಷ್ಣ ಜೋಯಿಸ್, ಸುಧಾ, ವಿದ್ಯಾ, ಪಾರ್ವತಮ್ಮ, ಜಯ್ಯಮ್ಮ ಹಾಗೂ ವಿಶ್ವ ಮಾಧ್ವ ಮಹಾಪರಿಷತ್, ಧರ್ಮ ಜ್ಞಾನವಾಹಿನಿ, ಭವಾನಿ ನೀಲಕಂಠೇಶ್ವರ ದೇವಸ್ಥಾನ ಅಭಿವೃದ್ಧಿ ಮತ್ತು ಧಾರ್ಮಿಕ ಚಿಂತನಾ ಸಮಿತಿ, ಪವಮಾನ ಪ್ರತಿಷ್ಠಾನ ಸದಸ್ಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net