ನೂರಾರು ಮಂದಿಗೆ ಆಹಾರದ ಕಿಟ್

BRM SML 20
Published on

ಭರಮಸಾಗರ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಗ್ರಾಮೀಣ ಜನತೆ ಲಾಕ್‌ಡೌನ್ ಕಡ್ಡಾಯವಾಗಿ ಪಾಲಿಸಬೇಕು ಎಂದು ಎಸ್‌ಎಂಎಲ್ ಗ್ರೂಪ್ ಮುಖ್ಯಸ್ಥ ಎಚ್.ಎನ್.ತಿಪ್ಪೇಸ್ವಾಮಿ ತಿಳಿಸಿದರು.

ಸೋಮವಾರ ಇಲ್ಲಿನ ವಿದ್ಯಾನಗರ, ಇಂದಿರಾ ಕಾಲನಿ ಹಾಗೂ ಇತರ ಸ್ಥಳಗಳಲ್ಲಿನ ಕೂಲಿ ಕಾರ್ಮಿಕರು, ನಿರಾಶ್ರಿತರು ಹಾಗೂ ಬಡ ಕುಟುಂಬದ ಮನೆ ಮನೆಗೆ ತೆರಳಿ ಆಹಾರದ ಕಿಟ್, ಸಾಬೂನು ವಿತರಿಸಿ ಮಾತನಾಡಿದರು.

ರಾಜ್ಯ ಕಕ್ಕುಟ ಮಹಾ ಮಂಡಳಿ ಉಪಾಧ್ಯಕ್ಷ ಡಿ.ಎಸ್.ರುದ್ರಮುನಿ, ಕೆಟಿಸಿ ಮಂಜುನಾಥ್, ಎನ್.ಎಚ್.ಮಂಜುನಾಥ್, ಕಿರಣ್, ಎಸ್‌ಎಂಎಲ್ ಶಾಲೆ ಕಾರ್ಯದರ್ಶಿ ಪ್ರವೀಣ್, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ನಿರಂಜನ್, ತುರುವನೂರು ಮಲ್ಲೇಶ್, ಪಿಂಟು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net