ಭರಣಿ ಮಹೋತ್ಸವ ಯಶಸ್ಸಿಗೆ ಬೇಕು ಸಹಕಾರ

Ull_Bhagavathi
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಭಗವತೀ ಕ್ಷೇತ್ರ ಭಾಗದಲ್ಲಿ ತೀಯಾ ಮಾತ್ರವಲ್ಲದೆ ಇತರ ಜಾತಿಯವರ ಆರಾಧ್ಯ ದೇವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಭರಣಿ ಮಹೋತ್ಸವ ಯಶಸ್ಸಿಗೆ ಸರ್ವರ ಸಹಕಾರ ಅಗತ್ಯ ಎಂದು ಉಳ್ಳಾಲ ಶ್ರೀ ಭಗವತೀ ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ ಹೇಳಿದರು. ಮಾ.30ರಿಂದ ಏ.5ರವರೆಗೆ ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ನಡೆಯಲಿರುವ ‘ಭರಣಿ ಮಹೋತ್ಸವ’ ಪ್ರಯುಕ್ತ ಭಾನುವಾರ ಆಮಂತ್ರಣ ಮತ್ತು ವಿಜ್ಞಾಪನಾ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಕ್ಷೇತ್ರದ ಆಚಾರ ಪಟ್ಟವರು ಮತ್ತು ಗುರಿಕಾರರು, ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ, ಕೋಶಾಧಿಕಾರಿ ಜಗದೀಶ್ ಉಳ್ಳಾಲ, ಹೊರೆಕಾಣಿಕೆ ಸಮಿತಿ ಸಂಚಾಲಕ ಉಮೇಶ್ ಬೆಂಜನಪದವು, ಮೊಕ್ತೇಸರರಾದ ವಿಶ್ವನಾಥ ಉಚ್ಚಿಲ್, ಸದಾಶಿವ ಉಳ್ಳಾಲ, ರಾಘವ ಕೈಕಂಬ, ಉಮೇಶ್ ಕೊಣಾಜೆ, ಉಪಾಧ್ಯಕ್ಷರಾದ ದಿನೇಶ್ ಕುಂಪಲ, ದಾಮೋದರ ತಚ್ಚಾಣಿ, ನಾಗಪ್ಪ ಅಡ್ಯಾರ್, ಜನಾರ್ದನ ಕಾಯರ್ ಪಳಿಕೆ, ಕಾರ್ಯದರ್ಶಿಗಳಾದ ಕಾಂಚನ್ ಕುಮಾರ್, ಸುರೇಶ್ ಬೀರಿ, ಧನಂಜಯ ಬೆಂಜನಪದವು, ಹರಿಶ್ಚಂದ್ರ ಕುತ್ತಾರ್, ಗೌರವ ಸಲಹೆಗಾರರಾದ ನಾಗೇಶ್ ತೊಕ್ಕೊಟ್ಟು, ಪ್ರಕಾಶ್ ಕೆ.ಪಿ.ನಾರ್ಲ, ತಾರನಾಥ್ ಕೊಡ್ಮನ್, ವೆಂಕಪ್ಪ ಮೋರ್ಲ, ಯುವವೇದಿಕೆಯ ಪ್ರಧಾನ ಸಂಚಾಲಕ ಕೇಶವ ತೊಕ್ಕೊಟ್ಟು, ಮಹಿಳಾ ವೇದಿಕೆ ಪ್ರಧಾನ ಸಂಚಾಲಕಿ ಮಾಧವಿ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಯಶವಂತ ಉಚ್ಚಿಲ್ ಸ್ವಾಗತಿಸಿದರು.

ಮೂರು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಭರಣಿ ಮಹೋತ್ಸವ ನಡೆಸುತ್ತಾ ಬರಲಾಗಿದೆ. ಈ ಬಾರಿ ಹಿಂದಿಗಿಂತಲೂ ವಿಜೃಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕೆಂಬ ಉದ್ದೇಶದಿಂದ ಪ್ರತಿ ಮನೆಗೆ ಆಮಂತ್ರಣ ಪತ್ರಿಕೆ ತಲುಪಿಸುವ ಕಾರ್ಯ ನಡೆಯಬೇಕು. - ಚಿದಾನಂದ ಗುರಿಕಾರ ನಂದ್ಯ, ಕ್ಷೇತ್ರದ ಅಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net