ಜನರ ಕೂಗಿಗೆ ಮರವೇರಿದ ಕರಡಿ

BMS KARADI 27 (1)
Published on

ಭರಮಸಾಗರ: ಹೋಬಳಿಯ ಆಜಾದ್‌ನಗರ ಸಮೀಪದ ಹೊಲವೊಂದರಲ್ಲಿ ಭಾನುವಾರ ಕರಡಿ ಮರವೇರಿ ಕುಳಿತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.

ರೇಷ್ಮೆ ಬೆಳೆ ಜಮೀನಿನಲ್ಲಿ ಮಧ್ಯಾಹ್ನ ಕರಡಿ ಕಾಣಿಸಿಕೊಂಡಾಗ ರೈತರು ಜೋರಾಗಿ ಕಿರುಚಿಕೊಂಡಿದ್ದು, ತಕ್ಷಣ ಅದು ಮರವೇರಿ ಅವಿತುಕೊಂಡಿದೆ.

ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಮೂಲಕ ಸೆರೆಗೆ ಯತ್ನಿಸಿದರು. ಆದರೆ, ಕರಡಿ ಮರ ಬಿಟ್ಟು ಕೆಳಗೆ ಬರಲಿಲ್ಲ. ಕತ್ತಲಾಗಿರುವುದರಿಂದ ಕರಡಿ ಮರದಿಂದ ಇಳಿದು ಕಾಡಿಗೆ ವಾಪಸಾಗಬಹುದು ಎಂದು ವಿಶ್ವಾಸದಿಂದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಸ್ಥಗಿತಗೊಳಿಸಿದರು.

ರಾತ್ರಿ 12 ವೇಳೆಗೆ ಕೆಳಗಿಳಿದ ಕರಡಿ ಅರಣ್ಯ ಇಲಾಖೆ ಸಿಬ್ಬಂದಿ ಹಾಕಿದ್ದ ಬಲೆಯಿಂದ ನುಣುಚಿಕೊಂಡು ಕಾಡಿನತ್ತ ಪರಾರಿಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net