ದ್ವಾದಶ ಜ್ಯೋತಿರ್ಲಿಂಗ ದರ್ಶನ

SHIVALINGA download
Published on

ಭರಮಸಾಗರ: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬ್ರಹ್ಮಕುಮಾರೀಸ್ ಸೇವಾ ಕೇಂದ್ರದಲ್ಲಿ ಫೆ.21ರಿಂದ 25ರವರೆಗೆ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ, ಮನಃಶಾಂತಿಗಾಗಿ ಶಿವಧ್ಯಾನ, ಆಧ್ಯಾತ್ಮಿಕ ಚಿತ್ರ ಪ್ರದರ್ಶನ. ಫೆ.26 ರಿಂದ ಮಾ.6ರ ವರೆಗೆ ಸಹಜ ರಾಜಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ.

84ನೇ ತ್ರಿಮೂರ್ತಿ ಮಹಾ ಶಿವರಾತ್ರಿ ಅಂಗವಾಗಿ ಫೆ.20 ರ ಬೆಳಗ್ಗೆ ಶಿವಧ್ವಜಾರೋಹಣ, ಜ್ಯೋತಿರ್ಲಿಂಗಗಳ ಉದ್ಘಾಟನೆ, ಸಭಾ ಕಾರ್ಯಕ್ರಮ ನಡೆಯಲಿವೆ ಎಂದು ಸಂಚಾಲಕಿ ಹಾಗೂ ಬ್ರಹ್ಮಕುಮಾರಿ ರೇಖಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net