ತಂತ್ರಜ್ಞಾನ ಜಗತ್ತಿನಲ್ಲಿ ಮನುಷ್ಯ ಕುಬ್ಜ

BMS NSS 27 (1)
Published on

ಭರಮಸಾಗರ: ತಂತ್ರಜ್ಞಾನ ಯುಗದಲ್ಲಿ ಮನುಷ್ಯ ಕುಬ್ಜನಾಗುತ್ತಿದ್ದಾನೆ ಎಂದು ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್ ಕಳವಳ ವ್ಯಕ್ತಪಡಿಸಿದರು.

ಸಿರಿಗೆರೆ ಎಂ.ಬಸವಯ್ಯ ವಸತಿ ಮಹಾವಿದ್ಯಾಲಯದಿಂದ ಹೋಬಳಿಯ ಹಳವುದರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮನುಷ್ಯ ವಿಶಾಲ ಭಾವನೆ ಬೆಳೆಸಿಕೊಳ್ಳಲು ಎನ್ನೆಸ್ಸೆಸ್ ಶಿಬಿರ ಪೂರಕವಾಗುತ್ತವೆ. ಸೇವೆ, ಕ್ರೀಡೆ, ಮನೋರಂಜನೆ ಮೂಲಕ ವಿದ್ಯಾರ್ಥಿಗಳು ಗ್ರಾಮೀಣ ಜನರೊಂದಿಗೆ ಬೆರೆಯಬೇಕು ಎಂದರು.

ಪ್ರಾಚಾರ್ಯ ಪ್ರೊ.ಡಿ.ಎಂ.ನಾಗರಾಜ್ ಮಾತನಾಡಿ, ಶಿಬಿರಾರ್ಥಿಗಳಿಂದ ನಡೆದ ಶ್ರಮದಾನ ಗ್ರಾಮದಲ್ಲಿ ಜಾಗೃತಿ ಮೂಡಿಸಬೇಕು. ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಬೇಕು ಎಂದು ತಿಳಿಸಿದರು

ಸಹಾಯಕ ಪ್ರಾಧ್ಯಾಪಕ ಎನ್.ಮುತ್ತೇಶ್, ಎಸ್.ಸಿ.ಶರತ್, ಎಂ.ಚನ್ನಬಸಪ್ಪ, ಅಂಚೆ ಹನುಮಂತಪ್ಪ, ಎಚ್.ಎಂ.ನಾರಪ್ಪ, ಕೆ.ಇ.ಶರಣಪ್ಪ, ಎಚ್.ಎಂ.ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net