ಇಂದು ಬಸವೇಶ್ವರ ರಥೋತ್ಸವ

SIRIGERE SWAMIJI
Published on

ಭರಮಸಾಗರ: ಹೋಬಳಿಯ ಬಸವನ ಶಿವನಕೆರೆ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಮಾ.6ರಂದು ನಡೆಯಲಿದೆ.

ಉತ್ಸವದ ಅಂಗವಾಗಿ ಸೋಮವಾರ ಸ್ವಾಮಿಯ ಕಂಕಣ ಧಾರಣೆ ಮತ್ತು ಧ್ವಜಾರೋಹಣ, ಶುಕ್ರವಾರ ಬೆಳಗ್ಗೆ ಉಪ ರಥೋತ್ಸವ, ಸಂಜೆ 5.30ಕ್ಕೆ ಮಹಾ ರಥೋತ್ಸವ ಜರುಗಲಿದೆ. ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ರಥಕ್ಕೆ ಪೂಜಿಸಿ ಚಾಲನೆ ನೀಡುವರು.

ಶನಿವಾರ ಜವಳ, ಪಾನಕಗಾಡಿ, ಹರಕೆ ಕಾಣಿಕೆ ಸಮರ್ಪಣೆ, ಬಸವನ ಶಿವನಕೆರೆ, ಬೇಡರ ಶಿವನಕೆರೆ ವೀರಗಾಸೆ ಕಲಾವಿದರಿಂದ ವೀರಗಾಸೆ ಸೇವೆ , ಭಜನೆ, ನೃತ್ಯ ಹಾಗೂ ಸ್ವಾಮಿಯ ಅಂದಲೀಕೋತ್ಸವ, ಮಹಾ ಮಂಗಳಾರತಿ ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net