ಸರ್ವ ಇಂದ್ರಿಯಗಳಲ್ಲಿ ನೇತ್ರ ಪ್ರಧಾನ

BRM ESAMUDRA RATHOTHSVA 28 (1)
Published on

ಭರಮಸಾಗರ: ಸರ್ವ ಇಂದ್ರಿಯಗಳಲ್ಲಿ ನೇತ್ರ ಪ್ರಧಾನವಾದದ್ದು, ಅವುಗಳ ಆರೈಕೆ ಬಗ್ಗೆ ಗಮನ ಅರಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರ, ರಾಷ್ಟ್ರೀಯ ಬಾಲಸ್ವಾಸ್ಥ್ಯ , ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ ಸಮೀಪದ ಕೋಡಿರಂಗವ್ವನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳ ನೇತ್ರ ತಪಾಸಣೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳ ಕಣ್ಣುಗಳ ತಪಾಸಣೆ ನಡೆಸಿ ದೃಷ್ಟಿ ದೋಷಕ್ಕೆ ತಕ್ಕಂತೆ ಕನ್ನಡಕ ವಿತರಿಸಲಾಗುತ್ತಿದೆ ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಹಣ್ಣು, ತರಕಾರಿಗಳನ್ನು ನಿತ್ಯ ಆಹಾರದೊಂದಿಗೆ ಸೇವಿಸುವುದರಿಂದ ದೃಷ್ಟಿದೋಷ ನಿವಾರಣೆಗೆ ಸಹಕಾರಿಯಾಗುತ್ತದೆ. ಎ ಅನ್ನಾಂಗದ ಕೊರತೆಯಿಂದಾಗಿ ಇರುಳು ಕಣ್ಣು ದೋಷ ಉಂಟಾಗುತ್ತದೆ. ಈ ದೃಷ್ಟಿಯಿಂದ ಆರೋಗ್ಯ ಇಲಾಖೆಯು 10 ತಿಂಗಳ ಶಿಶುವಿನಿಂದ 2 ವರ್ಷದ ಮಗುವಿನ ವರೆಗೆ ಕಣ್ಣುಗಳ ಉಚಿತ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಾಚಾರ್ಯ ಶಶಿಕಿರಣ್, ಹಾಸ್ಟಲ್ ವಾರ್ಡನ್ ಮಲ್ಲಿಕಾರ್ಜುನ್ ಡಾ.ಮಹೇಂದ್ರ, ಬಾಲಸ್ವಾಸ್ಥ್ಯ ಕಾರ್ಯಕ್ರಮ ತಂಡದ ಡಾ.ಸುಪ್ರಿತಾ, ನೇತ್ರಾಧಿಕಾರಿ ಡಿ.ರಜನಿ, ಹಿರಿಯ ಆರೋಗ್ಯ ಸಹಾಯಕ ಆಂಜನೇಯ, ಜಯಲಕ್ಷ್ಮಿ, ಪೂಜಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net