ಮೋದಿ ಆಡಳಿತಕ್ಕೆ ಜನಮೆಚ್ಚುಗೆ

BRM CHANDRAPPA 14 (2)
Published on

ಭರಮಸಾಗರ: ಹಲವು ಸಂಕಷ್ಟಗಳ ಮಧ್ಯೆ ದೇಶವನ್ನು ಆರು ವರ್ಷಗಳಿಂದ ಸಮರ್ಥವಾಗಿ ಮುನ್ನಡೆಸುತ್ತಿರುವ ಮೋದಿ ಆಡಳಿತ ಜನಮೆಚ್ಚುಗೆ ಗಳಿಸಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಬಿಜೆಪಿ ಸರ್ಕಾರದ ಜನಪರ ಯೋಜನೆಗಳ ವಿವರದ ಕರಪತ್ರವನ್ನು ಮನೆ ಮನೆಗೆ ಹಂಚಿಸುವ ಕಾರ್ಯಕ್ರಮಕ್ಕೆ ಗ್ರಾಮದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಎರಡನೇ ಅವಧಿಯ ಮೊದಲ ವರ್ಷ ಪೂರೈಸಿರುವ ಮೋದಿ ಅವರು, ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯರಾದ ಕಲ್ಲೇಶ್, ನಾಗೇಂದ್ರಪ್ಪ, ಶೇಖರಪ್ಪ, ಕೋಗುಂಡೆ ವಿರೂಪಾಕ್ಷಪ್ಪ ಗೌಡ್ರು, ಎಚ್.ಎಂ.ಮಂಜುನಾಥ್, ಸಾಮಿಲ್ ಶಿವಣ್ಣ, ನಾರಾಯಣರಾವ್, ಕೊಳಹಾಳು ಶರಣಪ್ಪ, ಭೀಮಣ್ಣ, ಎಪಿಎಂಸಿ ಸದಸ್ಯೆ ಲೋಲಾಕ್ಷಮ್ಮ, ಸಿ.ಟಿ.ಮಹಂತೇಶ್, ಯಮ್ಮನಘಟ್ಟ ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net