

ಭರಮಸಾಗರ: ಹೂಳೆತ್ತುವ ಕೆರೆಗಳಲ್ಲಿ ತ್ಯಾಜ್ಯ ಎಸೆಯದಂತೆ ಗ್ರಾಮಾಡಳಿತ ನೋಡಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರೂ ಕಾಳಜಿ ವಹಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.
ಹೋಬಳಿಯ ಇಸಾಮುದ್ರ ಗ್ರಾಮದ ಕೆರೆಯಲ್ಲಿ ಭಾನುವಾರ ಜಲಾಮೃತ ಯೋಜನೆಯಡಿ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಭರಮಸಾಗರ ದೊಡ್ಡಕೆರೆಗೆ ಶೀಘ್ರವೇ ಏತನೀರಾವರಿ ಯೋಜನೆ ಮೂಲಕ ನೀರು ಬರಲಿದೆ. ಅಲ್ಲಿಂದ ಇತರೆ 43 ಕೆರೆಗಳಿಗೂ ನೀರು ಹರಿಸುವ ಕಾಮಗಾರಿ ಈಗಾಗಲೇ ಚುರಿಕಿನಿಂದ ಸಾಗಿದೆ. ನೀರು ಬರುವುದರೊಳಗೆ ಕೆರೆಗಳ ಹೂಳೆತ್ತುವ ಕಾರ್ಯವನ್ನು ಮುಗಿಸಿಕೊಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು.
ಜಿಪಂ ಸದಸ್ಯ ಡಿ.ವಿ. ಶರಣಪ್ಪ, ತಾಪಂ ಸದಸ್ಯರಾದ ಎನ್. ಕಲ್ಲೇಶ್, ನಾಗೇಂದ್ರಪ್ಪ, ಶೇಖರಪ್ಪ, ಕೋಗುಂಡೆ ಮಂಜುನಾಥ್, ಸಾಮಿಲ್ ಶಿವಣ್ಣ, ಇಸಾಮುದ್ರ ರಾಜಶೇಖರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ತಾಂಡಾ ಅಭಿವೃದ್ಧಿ ನಿಗಮ ನಿರ್ದೇಶಕ ಗಿರೀಶ್, ಇಂಜಿನೀಯರ್ ವೀರಪ್ಪ, ಡಿ.ಎಸ್.ಪ್ರದೀಪ್, ಯಮ್ಮನಘಟ್ಟ ಶಿವಣ್ಣ, ತಿಪ್ಪೇಸ್ವಾಮಿ, ಚಂದ್ರು, ಸಿದ್ದೇಶ್, ಜಲಾಮೃತ ಯೋಜನೆ ಸಂಯೋಜನಾಧಿಕಾರಿಗಳು, ಗ್ರಾಪಂ ಸದಸ್ಯರಿದ್ದರು.