13ಕ್ಕೆ ಕೆರೆ ನೀರು ಯೋಜನೆ ಸ್ಥಳ ಪರಿಶೀಲನೆ

SIRIGERE SWAMIJI
Published on

ಭರಮಸಾಗರ: ಕೆರೆಗಳಿಗೆ ನೀರು ಹರಿಸುವ ಯೋಜನೆಯ ನೀಲಿ ನಕ್ಷೆ ಪ್ರಕಾರ ಮಾ.13ರಂದು ಸ್ಥಳ ಪರಿಶೀಲನೆ ನಡೆಸಲಿರುವುದಾಗಿ ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಹೋಬಳಿಯ ಬಸವನಶಿವನಕೆರೆ ಗ್ರಾಮದಲ್ಲಿ ಶುಕ್ರವಾರ ನಡೆದ ಬಸವೇಶ್ವರ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿದ್ದ ಶ್ರೀಗಳು, ಕೆರೆ ನೀರು ಹೋರಾಟ ಸಮಿತಿ ಹಾಗೂ ಇಂಜಿನಿಯರೊಂದಿಗೆ ಚರ್ಚಿಸಿ ಮಾತನಾಡಿದರು.

ಭರಮಸಾಗರ ಕೆರೆ ನೀರು ಯೋಜನೆಯ ಜಾಕ್‌ವೆಲ್ ನಿರ್ಮಾಣದ ಜಾಗ ಹಾಗೂ ಮಲಶೆಟ್ಟಿಹಳ್ಳಿಯ ವರೆಗೆ ಪೈಪ್‌ಲೈನ್ ಅಳವಡಿಸುವ ಜಾಗಗಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net