ಕೊಟ್ಟೂರಿಗೆ 23ನೇ ವರ್ಷದ ಪಾದಯಾತ್ರೆ

BRM (KOTTRU PADAYATRE 1) 16
Published on

ಭರಮಸಾಗರ: ಕೊಟ್ಟೂರಿನಲ್ಲಿ ಮಂಗಳವಾರ ಜರುಗಲಿರುವ ಕೊಟ್ಟೂರು ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಭರಮಸಾಗರದ ಕೊಟ್ಟೂರೇಶ್ವರ ಪಾದಯಾತ್ರೆ ಸಮಿತಿಯಿಂದ 23ನೇ ವರ್ಷದ ಪಾದಯಾತ್ರೆಯು ಭಾನುವಾರ ಸಂಜೆ ವಿನಾಯಕ ದೇವಸ್ಥಾನದಿಂದ ಆರಂಭಗೊಂಡಿತು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸ್ವಾಮಿಯ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಳೆದ 22 ವರ್ಷಗಳಿಂದ ಪಾದಯಾತ್ರೆಗೆ ಸಹಕರಿಸಿದ ಎಲ್ಲ ಮುಖಂಡರನ್ನು ಗೌರವಿಸಲಾಯಿತು. ನಂತರ ಪಾದಯಾತ್ರೆ ಮುಂದುವರಿಯಿತು.

ಬಿಳಿಚೋಡು, ಬಸವನಕೋಟೆ, ಮಡ್ಡರಹಳ್ಳಿ ಮೂಲಕ 70 ಕಿ.ಮೀ. ಕ್ರಮಿಸಿ ಕೊಟ್ಟೂರು ತಲುಪಲಿದೆ. ಮಕ್ಕಳು, ಮಹಿಳೆಯರು ಸೇರಿ 100ಕ್ಕೂ ಹೆಚ್ಚು ಭಕ್ತಾದಿಗಳು ಹೆಜ್ಜೆ ಹಾಕಿದರು.

ಕೇಸರಿ ವಸ್ತ್ರದಾರಿಗಳಾಗಿ ಹೆಗಲ ಮೇಲೆ ಚೌಕುಳಿ ಹಾಕಿ ಗುರು ಕೊಟ್ಟೂರೇಶ್ವರರ ಧ್ಯಾನ ಮತ್ತು ಭಜನೆಯೊಂದಿಗೆ ಉಲ್ಲಾಸದಿಂದ ಪಾದಯಾತ್ರೆಯಲ್ಲಿ ಸಾಗಿದ ದೃಶ್ಯ ಕಂಡುಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net