ಇಂದು ಕೋಗುಂಡೆ ಜಾತ್ರೆ ಆರಂಭ

BMS JATRE 03
Published on

ಭರಮಸಾಗರ: ಸಮೀಪದ ಕೋಗುಂಡೆ ಗ್ರಾಮದಲ್ಲಿ 15 ವರ್ಷದ ನಂತರ ಗ್ರಾಮ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಜರುಗಲಿದೆ.

ಐದು ದಿನಗಳ ಕಾಲ ಜರುಗುವ ಉತ್ಸವದಲ್ಲಿ ಮೊದಲ ದಿನವಾದ ಫೆ.4ರಂದು ಹೊಳೆಪೊಜೆ, 5ರ ಬೆಳಗ್ಗೆ ಮೀಸಲು ಸಮರ್ಪಣೆ, ಸಂಜೆ ದೊಡ್ಡ ಎಡೆ ಸೇವೆ. 6ರ ಬೆಳಗ್ಗೆ ಹರಕೆ ಅರ್ಪಣೆ, ಸಂಜೆ ಹೂವಿನಪಲ್ಲಕ್ಕಿ ಉತ್ಸವ. 7ರ ಬೆಳಗ್ಗೆ ಹಾರೆ ಪವಾಡ, ಕತ್ತಿ ಪವಾಡ, ಸಂಜೆ ಅಗ್ನಿಕುಂಡ ಸೇವೆ ನಡೆಯಲಿದೆ.

6ರ ಬೆಳಗ್ಗೆ 10ಕ್ಕೆ ಕುಸ್ತಿ ಪಂದ್ಯಾವಳಿ, ರಾತ್ರಿ 10.30ಕ್ಕೆ ‘ಪುಂಡರ ವಿರುದ್ಧ ಘರ್ಜಿಸಿದ ಹುಲಿ’ ಅರ್ಥಾತ್ ಶ್ರೀಮಂತರ ಕಾರಸ್ಥಾನ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಫೆ.8ರ ಬೆಳಗ್ಗೆ 9ಕ್ಕೆ ಭಂಡಾರ ತಣಿಗೆಯೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net