ಮೆಕ್ಕೆಜೋಳದ ರಾಶಿ ಬೆಂಕಿಗಾಹುತಿ

BRM FIRE 22 (2)
Published on

ಭರಮಸಾಗರ: ಹೋಬಳಿಯ ಚಿಕ್ಕಬೆನ್ನೂರು ಗ್ರಾಮದಲ್ಲಿ ಸಂಗ್ರಹಿಸಿಟ್ಟಿದ್ದ ಅಂದಾಜು 100 ಟ್ರಾೃಕ್ಟರ್ ಲೋಡು ಮೆಕ್ಕೆಜೋಳದ ರಾಶಿ ಶನಿವಾರ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಸಂಪೂರ್ಣ ಸುಟ್ಟಿದೆ.

ಗ್ರಾಮದ ಅಜ್ಜಪ್ಪ, ಮೀನಾಕ್ಷಮ್ಮ, ವೀರೇಶ್, ರಾಜಪ್ಪ, ಬಸಣ್ಣ, ಬಾಬಣ್ಣ, ರಾಜಣ್ಣ, ಬಸಕ್ಕ ಎಂಬ 8 ರೈತರಿಗೆ ಸೇರಿದ ಮೆಕ್ಕೆಜೋಳದ ರಾಶಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಚಿತ್ರದುರ್ಗದಿಂದ ಎರಡು ವಾಹನಗಳೊಂದಿಗೆ ಆಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿದ್ದಾರೆ. ಭರಮಸಾಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net