ಬಸವನ ಶಿವನಕೆರೆಗೆ ಶಾಂತಿ ಸಾಗರದಿಂದ ನೀರು

BRM MLA 12 (2)
Published on

ಭರಮಸಾಗರ: ಹೋಬಳಿಯ ಬಸವನ ಶಿವನಕೆರೆ ಬಸವೇಶ್ವರ ಜಾತ್ರೆ ಆರಂಭಕ್ಕೂ ಮೊದಲೇ ಗ್ರಾಮದ ಸಂಪರ್ಕ ರಸ್ತೆಯ ಡಾಂಬರೀಕರಣ ಮುಗಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಗುತ್ತಿಗೆದಾರರಿಗೆ ಸೂಚಿಸಿದರು.

ಮಂಗಳವಾರ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಸವನ ಶಿವನಕೆರೆ- ಬ್ಯಾಲಾಳು ರಸ್ತೆ ಅಭಿವೃದ್ಧಿಗೆ 1.5 ಕೋಟಿ ರೂ. ಅನುದಾನ ನೀಡಲಾಗಿದೆ. ಆದಷ್ಟು ಬೇಗ ಕೆಲಸ ಮುಗಿಸಬೇಕು ಎಂದರು.

ಗ್ರಾಮದ ಕುಡಿವ ನೀರಿನ ಸಮಸ್ಯೆ ನಿವಾರಣೆಗಾಗಿ ಶಾಂತಿಸಾಗರದಿಂದ ಪೈಪ್‌ಲೈನ್ ಮೂಲಕ ನೀರು ತರಲು ಚಿಂತಿಸಲಾಗಿದೆ. ಯಾವ ಮಾರ್ಗದಲ್ಲಿ ಪೈಪ್‌ಲೈನ್ ಅಳವಡಿಸಬೇಕೆಂಬುದನ್ನು ಗ್ರಾಮಸ್ಥರು ಸಂಬಂಧಿಸಿದ ಇಂಜಿನಿಯರ್‌ಗೆ ತಿಳಿಸಿದರೆ ಮುಂದಿನ ಕೆಲಸ ಆರಂಭಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net