ಗೊಲ್ಲರಹಟ್ಟಿಯಲ್ಲಿ ದೇವರುಗಳ ಮೆರವಣಿಗೆ

BRM GOLLARAHATTI JATRE 03 (2)
Published on

ಭರಮಸಾಗರ: ಸಮೀಪದ ದೇವರ ಗೊಲ್ಲರಹಟ್ಟಿಯಲ್ಲಿ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಸೋಮವಾರ ಸಂಜೆ ಅಲಂಕೃತ ಎತ್ತುಗಳ ಪಾನಕದ ಬಂಡಿ ಉತ್ಸವ ಹಾಗೂ ವೀರಗಘಟ್ಟಿ ನಾಗಪ್ಪ, ದುರ್ಗಮ್ಮ, ಕುಕ್ಕುವಾಡದಮ್ಮ, ವೀರಭದ್ರ, ಜುಂಜಪ್ಪ ಮುಂತಾದ ದೇವರುಗಳ ಉತ್ಸವಮೂರ್ತಿ ಮೆರವಣಿಗೆ ನೆರವೇರಿತು.

ಮಂಗಳವಾರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ, ದೊಡ್ಡೆಡೆ ಸೇವೆ, ಹರಕೆ ಒಪ್ಪಿಸುವ ಕಾರ್ಯಕ್ರಮದ ನಂತರ ಭರಮಸಾಗರದ ದುರ್ಗಮ್ಮ, ಆಂಜನೇಯ ದೇವಸ್ಥಾನಗಳಿಗೆ ಮೆರವಣಿಗೆ ಮೂಲಕ ಸಾಗಿ ಹೊಳೆಪೂಜೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net