ಪತ್ತಿನ ಸಹಕಾರ ಸಂಘ ಕೈ ವಶ

BMS ELECTION 17 (1)
Published on

ಭರಮಸಾಗರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹನ್ನೊಂದು, ಬಿಜೆಪಿ ಬೆಂಬಲಿತ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ರಾತ್ರಿ 9.30ರ ವರೆಗೆ ನಡೆದ ಮತ ಏಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಿಟರ್ನಿಂಗ್ ಅಧಿಕಾರಿ ಬಷೀರ್ ಖಾನ್ ಫಲಿತಾಂಶ ಪ್ರಕಟಿಸಿದರು.

ಸಾಲಗಾರರ ಕ್ಷೇತ್ರಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಅಶ್ರಫ್ ಉಲ್ಲಾ (271), ಎಂ.ಎಸ್.ಕೃಷ್ಣಪ್ಪ (284), ಟಿ.ಆರ್.ಚನ್ನೇಶ್ (302), ಡಿ.ಚಂದ್ರಶೇಖರ್(259), ಎನ್.ಎಚ್.ಮಂಜುನಾಥ್ (285), ರೇವಮ್ಮ (272), ಬಿ.ಶಿವಣ್ಣ (269), ಜಿ.ಸಿದ್ದಪ್ಪ (256), ಸಿದ್ದಮ್ಮ (269), ಎಚ್.ಎನ್.ಸೋಮಶೇಖರ್ 296 ಮತ ಪಡೆದು ಗೆಲುವು ಸಾಧಿಸಿದರು.

ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎಚ್.ವೆಂಕಟೇಶ್ (177), ಸಾಲಗಾರರ ಕ್ಷೇತ್ರ ಬಿಜೆಪಿ ಬೆಂಬಲಿತ ಅಭ್ಯರ್ಥಿ ಐ.ಎಂ.ಶಶಿಧರ್ 275 ಮತಗಳೊಂದಿಗೆ ಜಯ ಗಳಿಸಿದರು.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net