ಪೌಷ್ಟಿಕತೆಗೆ ಜಂತು ಮಾತ್ರೆ ಸಹಕಾರಿ

BRM DC Pro 10
Published on

ಭರಮಸಾಗರ: ಮಕ್ಕಳ ಉತ್ತಮ ಆರೋಗ್ಯ ಹಾಗೂ ಬೆಳವಣಿಗೆಗೆ ಜಂತು ನಿವಾರಕ ಮಾತ್ರೆ ಅಗತ್ಯ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.

ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಬರಿಗಾಲಿನ ನಡಿಗೆ, ಮಣ್ಣಿನಲ್ಲಿ ಆಟ, ಅಸುರಕ್ಷಿತ ಆಹಾರ ಸೇವನೆ, ಅನೈರ್ಮಲ್ಯದಿಂದ ಜಂತುಹುಳು ಬಾಧೆ ಉಂಟಾಗುತ್ತದೆ. ಮಕ್ಕಳಲ್ಲಿ ಅಶಕ್ತತೆ, ಕುಬ್ಜತೆ, ಬಡಕಲು ದೇಹ ಹೊಂದುವುದು ಉಂಟಾಗುತ್ತದೆ. ಜಂತುಹುಳು ನಿವಾರಕ ಮಾತ್ರೆ ಸೇವನೆಯಿಂದ ಈ ಸಮಸ್ಯೆ ಪರಿಹರಿಸಿ, ಸಮಪ್ರಮಾಣದಲ್ಲಿ ಮಕ್ಕಳು ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಹೊಂದಬಹುದು ಎಂದು ಹೇಳಿದರು.

ಬಿಇಒ ಸಿದ್ದಪ್ಪ, ತಾಪಂ ಸದಸ್ಯ ಎನ್.ಕಲ್ಲೇಶ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಡಿ.ಎಸ್.ಪ್ರದೀಪ್, ಡಿ.ಎಸ್.ರಾಜು, ಪ್ರಾಂಶುಪಾಲ ಡಾ.ಆರ್.ಮಹೇಶ್, ಮುಖ್ಯಶಿಕ್ಷಕ ಮಹೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಸಹಶಿಕ್ಷಕ ರಾಜೂನಾಯ್ಕ, ಪಿಡಿಒ ಶ್ರೀದೇವಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net