ಮಹಿಳಾ ಶಿಕ್ಷಣಕ್ಕೆ ಶ್ರಮಿಸಿದ ನಿವೇದಿತಾ

Bharamasagara, BJP, Sister Nivedita, Birthday,
Published on

ಭರಮಸಾಗರ: ಸ್ವಾಮಿ ವಿವೇಕಾನಂದರ ಭವ್ಯ ಭಾರತದ ಕನಸು ನನಸಾಗಿಸಲು ಸೋದರಿ ನಿವೇದಿತಾ ಸಾಕಷ್ಟು ಪ್ರಯತ್ನಿಸಿದರು ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೊರ್ಚಾ ಅಧ್ಯಕ್ಷೆ ಲೋಲಾಕ್ಷಮ್ಮ ಹೇಳಿದರು.
ಗ್ರಾಮದ ಪಕ್ಷದ ಕಚೇರಿಯಲ್ಲಿ ಬುಧವಾರ ಸೊದರಿ ನಿವೇದಿತಾ ಅವರ ಜನ್ಮದಿನ ಆಚರಿಸಿ ಮಾತನಾಡಿ, ನಿವೇದಿತಾ ಅವರು ಜೀವನವನ್ನು ನಮ್ಮ ದೇಶಕ್ಕಾಗಿ ತ್ಯಾಗ ಮಾಡಿದ ಮಹಾನ್ ನಾಯಕಿ ಎಂದರು.
ಮಹಿಳೆಯರಿಗೆ ಶಾಲೆಗಳು ಇರದಿದ್ದ ಸಂದರ್ಭದಲ್ಲಿ ಅವರಿಗೆ ಜ್ಞಾನದಾನ ನೀಡಿದವರು. ಪ್ಲೇಗ್ ಕಾಣಿಸಿಕೊಂಡಾಗ ಜನಸೇವೆ ಮಾಡಿದ ಅವರು ಅಸಾಮಾನ್ಯ ಮಹಿಳೆ. ಅವರ ಪ್ರೀತಿ, ಗೌರವ ದೊಡ್ಡದು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಧಾ ಶೈಲೇಶ್, ಮಹಿಳಾ ಮೋರ್ಚಾ ಹೋಬಳಿ ಅಧ್ಯಕ್ಷೆ ರಾಜೇಶ್ವರಿ, ನಿರ್ಮಲಾ ಮಂಜುನಾಥ್, ಕರಿಯಮ್ಮ, ಮಂಜುನಾಥ್, ಕಮಲಮ್ಮ, ಕರುಣಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net