ಬಿಜೆಪಿ ತತ್ವ, ಸಿದ್ಧಾಂತ ಅನುಕರಣೀಯ

CHANDRAPPA M
Published on

ಭರಮಸಾಗರ: ಬಿಜೆಪಿ ತತ್ವ, ಸಿದ್ಧಾಂತಗಳು ಎಲ್ಲರಿಗೂ ಅನುಕರಣೀಯವಾಗಿದ್ದು, ಕಾರ್ಯಕರ್ತರು ತಂಡೋಪತಂಡವಾಗಿ ಸೇರ್ಪಡೆಯಾಗಿದ್ದಾರೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ಪ್ರವಾಸಿ ಮಂದಿರದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಂಡಲಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಪಕ್ಷದ ಮುಖಂಡರು, ಅನುಭವಿಗಳು ಸೇರಿ ವಿವಿಧ ಮೋರ್ಚಾದ ಕಾರ್ಯಕಾರಿ ಮಂಡಳಿಗಳಿಗೆ ಸದಸ್ಯರ ಆಯ್ಕೆ ಮಾಡಲಾಗುವುದು. ಕಾರ್ಯಕರ್ತರು ಪಕ್ಷ ಸಂಘಟನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸಬೇಕು. ಕರೊನಾದಂತಹ ಕಷ್ಟ ಸಮಯದಲ್ಲೂ ಧೃತಿಗೆಡದೆ ಸರ್ಕಾರದ ಯೋಜನೆಗಳು ಎಲ್ಲರಿಗೂ ದೊರೆಯುವಂತೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಜಿಪಂ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯರಾದ ಕಲ್ಲೇಶ್, ನಾಗೇಂದ್ರಪ್ಪ, ಶೇಖರಪ್ಪ, ಕೋಗುಂಡೆ ವಿರೂಪಾಕ್ಷಪ್ಪ ಗೌಡ್ರು, ಎಚ್.ಎಂ.ಮಂಜುನಾಥ್, ಸಾಮಿಲ್ ಶಿವಣ್ಣ, ನಾರಾಯಣರಾವ್, ಕೊಳಹಾಳು ಶರಣಪ್ಪ, ಭೀಮಣ್ಣ, ಲೋಲಾಕ್ಷಮ್ಮ, ಸಿರಿಗೆರೆ ಮೋಹನ್, ಸಿ.ಟಿ.ಮಹಂತೇಶ್, ಯಮ್ಮನಘಟ್ಟ ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net