ಕರೊನಾ ಆತಂಕಕ್ಕೆ ಹೋಳಿ ಕೈಬಿಟ್ಟ ವಿದ್ಯಾರ್ಥಿಗಳು

BRM SML SCHOOL
Published on

ಭರಮಸಾಗರ: ಕರೊನಾ ವೈರಸ್ ಇಡಿ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಜನರಲ್ಲಿ ಭೀತಿ ಆವರಿಸಿದೆ. ಆಮದು, ರಫ್ತು ಮೇಲೂ ಪರಿಣಾಮ ಬೀರಿದೆ. ವಿಮಾನ ನಿಲ್ದಾಣಗಳು ಆಸ್ಪತ್ರೆಯಂತೆ ಕಾರ್ಯನಿರ್ವಹಿಸುತ್ತಿವೆ.

ಭಾರತದಲ್ಲೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜನರ ಸಹಕಾರವೂ ಅಗತ್ಯ ಎಂದು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ.

ಈ ಮಧ್ಯೆ ಭರಮಸಾಗರದ ಎಸ್‌ಎಂಎಸ್ ಶಾಲೆ ವಿದ್ಯಾರ್ಥಿಗಳು ಮಾದರಿ ಕಾರ್ಯವೊಂದಕ್ಕೆ ಮುನ್ನುಡಿ ಬರೆದಿದ್ದಾರೆ. ಹೆಚ್ಚು ಜನ ಸೇರುವ ಹೋಳಿ ಹಬ್ಬವನ್ನು ಈ ವರ್ಷ ಆಚರಣೆ ಮಾಡುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಶಾಲಾ ಆವರಣದಲ್ಲಿ ಸೇರಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹೋಳಿ ಆಚರಣೆ ಕೈ ಬಿಟ್ಟು ಅಂದಿನ ದಿನ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಿದರು.

ನಮ್ಮ ಮನೆ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡುವ ಜತೆಗೆ ಸುತ್ತಮುತ್ತಲ ಜನರಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.

ಮುಖ್ಯಶಿಕ್ಷಕಿ ಶೈಲಜಾ, ಸಹ ಶಿಕ್ಷಕರಾದ ಶಿವಾಚಾರ್ಯ, ಅವಿನಾಶ್, ಅಶ್ವಿನಿ, ನಾಗವೇಣಿ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net