ಜನಸ್ಪಂದನಾ ಸಭೇಲಿ ಕರೊನಾ ಜಾಗೃತಿ

BRM JANASPANDANA (3) 07
Published on

ಭರಮಸಾಗರ: ಆತಂಕಕ್ಕೆ ಕಾರಣವಾಗಿರುವ ಕರೊನಾ ಕುರಿತಂತೆ ತಾಲೂಕಿನ ಚಿಕ್ಕಬೆನ್ನೂರಲ್ಲಿ ಭಾನುವಾರ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಜಾಗೃತಿ ಮೂಡಿಸಲಾಯಿತು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಕರೊನಾ ಕುರಿತು ಯಾವುದೇ ಭಯ ಬೇಡ ಎಂದು ತಿಳಿಸಿದರು.

ಚೀನಾದಲ್ಲಿ 10ರಿಂದ 18 ಡಿಗ್ರಿ ಉಷ್ಣಾಂಶ ಇರುವುದರಿಂದ ವೈರಸ್ ಹರಡಿದ್ದು, ಕರ್ನಾಟಕದಲ್ಲಿ 25ರಿಂದ 35 ಡಿಗ್ರಿ ಗರಿಷ್ಠ ಪ್ರಮಾಣದ ಉಷ್ಠಾಂಶ ಇರುವುದಿರಂದ ಈ ವೈರಸ್ ಹರಡಲು ಸಾಧ್ಯವಿಲ್ಲ. ಆದರೆ, ಮುಂಜಾಗ್ರತೆಯಾಗಿ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು.

ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಮಾತನಾಡಿ, ಸರ್ಕಾರದ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷಣೆಯಡಿ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಸಭೆ ಸಹಾಯಕವಾಗಿದೆ ಎಂದು ತಿಳಿಸಿದರು.

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಪಹಣಿ ವಿತರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ತಾಪಂ ಇಒ ಎಚ್.ಕೃಷ್ಣನಾಯ್ಕ ಮಾತನಾಡಿ ಮೂಲಕ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಗ್ರಾಪಂ ಅಧ್ಯಕ್ಷೆ ಹನುಮಕ್ಕ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಷಾಯಿನಾಬಾನು, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕಿ ಉಷಾರಾಣಿ, ಪಿಎಸ್‌ಐ ರಾಜು, ಉಪ ತಹಸೀಲ್ದಾರ್ ಶಶಿಧರಯ್ಯ, ಡಾ.ಜಯಶ್ರೀ, ಪಿಡಿಒ ಹೇಮಾವತಿ, ಬಿಇಒ ಬಿ.ಸಿದ್ದಪ್ಪ, ಬೆಸ್ಕಾಂ ಎಇಇ ರಮೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net