ಬೀದಿಬದಿ ವ್ಯಾಪಾರಕ್ಕಿಲ್ಲ ಅಡ್ಡಿ

brm santhe 18 1
Published on

ಭರಮಸಾಗರ: ಪಟ್ಟಣದಲ್ಲಿ ಬುಧವಾರ ಎಂದಿನಂತೆ ಬೀದಿ ಬದಿ ವ್ಯಾಪಾರ ವಹಿವಾಟು ನಡೆಯಿತು. ರಸ್ತೆ ಬದಿಯ ತಿನಿಸಿ ಅಂಗಡಿಗಳು ತಾವು ತಯಾರಿಸಿದ್ದ ಪದಾರ್ಥಗಳನ್ನು ಮಾರಾಟ ಮಾಡಿದವು.

ಮಾಂಸ ಮಾರಾಟಕ್ಕೆ ತಡೆ ಇದ್ದರೂ ಚಿಕನ್, ಮಟನ್ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಇವುಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತ ಯಾವುದೇ ರೀತಿಯ ಕ್ರಮ ಕೈಗೊಂಡಂತೆ ಕಂಡುಬರಲಿಲ್ಲ.

ಸಂತೆಗಿರಲಿಲ್ಲ ಕರೊನಾ ಚಿಂತೆ: ವಾರದ ಸಂತೆ ಎಂದಿನಂತೆ ನಡೆಯಿತು. ನಸುಕಿನಲ್ಲೇ ವ್ಯಾಪಾರಸ್ಥರು ಮಾರುಕಟ್ಟೆಗೆ ಹಣ್ಣು, ತರಕಾರಿ ತಂದು ವ್ಯಾಪಾರ ನಡೆಸಿದರು. ಸೌತೆಕಾಯಿ, ಟೊಮ್ಯಾಟೊ ಹೆಚ್ಚು ಖರೀದಿಯಾಗಲಿಲ್ಲ.

ಸ್ಥಳೀಯ ನಿವಾಸಿ ಜೈಶಂಕರ್ ಬಾಲು ಹೇಳಿಕೆ: ಸಂತೆಗೆ ಜನಸಂದಣಿ ಸೇರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯ ಇಲಾಖೆ ಈ ಬಗ್ಗೆ ಮುಂಜಾತ್ರೆಗೆ ವಹಿಸಬೇಕಿತ್ತು.

ಪಿಡಿಒ ಶ್ರೀದೇವಿ ಹೇಳಿಕೆ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಒಂದು ದಿನ ಮುಂಚೆಯೇ ಸಂತೆ ನಡೆಸದಂತೆ ಮಾಹಿತಿ ನೀಡಿದ್ದೆವು. ಈ ವಿಚಾರ ತಿಳಿಯದ ಗ್ರಾಮೀಣರು ವ್ಯಾಪಾರಕ್ಕೆ ಬಂದಿದ್ದಾರೆ.ಹೆಚ್ಚಿನ ಜಾಗೃತಿ ಮೂಡಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net