

ಭರಮಸಾಗರ: ಪುಲ್ವಾಮಾ ದುರಂತ ದೇಶದ ಜನರಿಗೆ ಮಾಸದ ಗಾಯವಾಗಿದೆ ಎಂದು ಆರ್‌ಎಸ್‌ಎಸ್ ಸಂಚಾಲಕ ಮಂಜುನಾಥ್ ಹೇಳಿದರು.
ಇಲ್ಲಿನ ಆರ್‌ಎಸ್‌ಎಸ್ ಘಟಕದಲ್ಲಿ ಶುಕ್ರವಾರ ಬಜರಂಗದಳ, ಪತಂಜಲಿ ಮಹಿಳಾ ಯೋಗ ಸಮಿತಿ, ಓಂಕಾರ ಯೋಗ ಕೇಂದ್ರ, ಬಿಜೆಪಿ ಮಂಡಲದಿಂದ ಆಯೋಜಿಸಿದ್ದ ಹುತಾತ್ಮ ಯೋಧರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ಉಗ್ರರ ಕೃತ್ಯಕ್ಕೆ ಯೋಧರು ಬಲಿಯಾಗಿದ್ದು ದುರಂತ. ಹುತಾತ್ಮರ ಆತ್ಮಗಳಿಗೆ ಶಾಂತಿ ದೊರೆಯಲು ಸರ್ವರು ಪ್ರಾರ್ಥಿಸುವುದು ಮುಖ್ಯ ಎಂದರು. ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.