ಚೌಡೇಶ್ವರಿ ದೇವಿ ಪುನರ್ ಪ್ರತಿಷ್ಠಾಪನೆ

BMS MLA CHANDRAPPA 01 (3)
Published on

ಭರಮಸಾಗರ: ಸಮೀಪದ ಕೊಳಹಾಳು ಗ್ರಾಮದ ಚೌಡೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ ಮತ್ತು ಹೊಸ ದೇವಸ್ಥಾನ ನಿರ್ಮಾಣ, ಭೂಮಿ ಪೂಜೆಯನ್ನು ಶಾಸಕ ಎಂ.ಚಂದ್ರಪ್ಪ ಶುಕ್ರವಾರ ನೆರವೇರಿಸಿದರು.

ಪೂಜಾ ಕೈಕಂರ್ಯಗಳು ಗುರುವಾರದಿಂದ ಆರಂಭಗೊಂಡು ಶುಕ್ರವಾರ ಬೆಳಗ್ಗೆ ಬ್ರಾಹ್ಮಿಮುಹೂರ್ತದಲ್ಲಿ ದೇವಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ ವಿವಿಧ ಧಾರ್ಮಿಕ ಆಚರಣೆ ಬಳಿಕ ಚೌಡೇಶ್ವರಿ ರಕ್ಷಣಾ ದೇವಿ, ಮಹಾಲಕ್ಷ್ಮಿ ದೇವಿ ಹೊಸ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಜಿಪಂ ಸದಸ್ಯರಾದ ಎಮ್ಮೆಹಟ್ಟಿ ಆರ್.ಕೃಷ್ಣಮೂರ್ತಿ, ಡಿ.ವಿ.ಶರಣಪ್ಪ, ಮುಖಂಡರಾದ ಎಚ್.ಬಿ.ಶರಣಪ್ಪ, ವಿ.ವೀರಭದ್ರಪ್ಪ, ಸಾಮಿಲ್ ಶಿವಣ್ಣ, ಬಸವರಾಜಪ್ಪ, ಕೆ.ಇ.ರಾಜು, ಕರಿಬಸಪ್ಪ, ಅಜ್ಜಣ್ಣ, ಬಸವನಗೌಡ್ರು, ಎಚ್.ಸಿ.ಪರಮೇಶ್ವರಪ್ಪ, ಪುಟ್ಟಣ್ಣ ಕೊಳಹಾಳು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net