ದುರ್ಗಾಂಬಿಕಾ ದೇವಿ ಜಾತ್ರೆ ರದ್ದು

BRM DURGA 16 (2)
Published on

ಭರಮಸಾಗರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಮಂಗಳವಾರದಿಂದ ಆರಂಭಗೊಳ್ಳಬೇಕಿದ್ದ ಗ್ರಾಮದೇವತೆ ದಂಡಿನ ದುರ್ಗಮ್ಮ ದೇವಿ ಜಾತ್ರೋತ್ಸವವನ್ನು ರದ್ದುಗೊಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗೆ ಚ್ಯುತಿ ಬರಬಾರದೆಂಬ ಕಾರಣಕ್ಕೆ ದೇವಸ್ಥಾನ ಸಮಿತಿ ಸದಸ್ಯರು, ದೇವಿಗೆ ಅಲಂಕಾರ ಮಾಡಿ ಸರಳವಾಗಿ ಪೂಜೆ ಸಲ್ಲಿಸಿ ಉಡಿಅಕ್ಕಿ, ಅಕ್ಕಿ ಮೊಸರಿನ ಸೇವೆ ಸಲ್ಲಿಸಿದ್ದಾರೆ.

ಐದು ದಿನಗಳಲ್ಲಿ ನಡೆಯಬೇಕಿದ್ದ ಬೇವು ಬೇಟೆ, ಕುಸ್ತಿ, ದೇವಿ ಉತ್ಸವ ಮೂರ್ತಿ ಮೆರವಣಿಗೆ, ಸಿಡಿ ಮಹೋತ್ಸವ ಮುಂತಾದ ಧಾರ್ಮಿಕ ಕಾರ್ಯಗಳನ್ನು ರದ್ದುಗೊಳಿಸಲಾಗಿದೆ.

ಭಕ್ತರು ಮನೆಯಲ್ಲೇ ಇದ್ದು ದೇವಿ ಆರಾಧನೆ ಮಾಡಬೇಕೆಂದು ದೇವಸ್ಥಾನ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net