ಭರಮಸಾಗರದಲ್ಲಿ ದತ್ತಾತ್ರೇಯ ಜಯಂತಿ

BRM datta jayanthi 18 (3)
Published on

ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಪಟ್ಟಣದ ದೊಡ್ಡಕೆರೆ ಬಳಿಯ ಸದ್ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ದತ್ತ ಜಯಂತಿ ನೆರವೇರಿತು.

ಮುಂಜಾನೆ ಕಾಕಡಾರತಿ, ಪಾದಪೂಜೆ, ಭಿಕ್ಷಾ, ರುದ್ರಾಭಿಷೇಕ, ಅಲಂಕಾರ ಸೇವೆ, ಅನ್ನಪೂರ್ಣೇಶ್ವರಿ ಪೂಜೆ ನಂತರ ಮಹಾ ಪ್ರಸಾದ ವಿನಿಯೋಗ ಜರುಗಿತು. ಸಂಜೆ ದೀಪೋತ್ಸವ, ಭಜನೆಯೊಂದಿಗೆ ಜಯಂತಿ ಸಂಪನ್ನಗೊಂಡಿತು.

ಸುಬ್ರಹ್ಮಣ್ಯ ಪುರಾಣಿಕ್, ಬಿ.ಮಲ್ಲಾರಿರಾವ್ ನಾಡಿಗೇರ್, ವಿನಯ್ ಕುಮಾರ್ ನಾಡಿಗೇರ್, ವಿಕ್ರಮ್ ನಾಡಿಗೇರ್, ಭಾರತಮ್ಮ ಭವ್ಯಾ, ಗಾಯತ್ರಿ, ಹುಣಸೇಕಟ್ಟೆ ಸುರೇಶ್, ನಾಗಭೂಷಣ್, ಶ್ರೀಪಾದ್ ಹಾಗೂ ವಿವಿಧ ಭಾಗಗಳಿಂದ ಅಸಂಖ್ಯ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net