ಭಾರತದ ಪ್ರತಿಷ್ಠೆ ಹೆಚ್ಚಿಸಿದ ವಿಶ್ವನಾಯಕ ಮೋದಿ - ವಿ. ಭಾನುಪ್ರಕಾಶ್

bbbbbbbbbbbb
Published on





ಮಂಗಳೂರು : ಸುಭದ್ರ, ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಎಲ್ಲ ಭಾರತೀಯರ ಮನಸ್ಸುಗಳನ್ನು ಒಂದುಗೂಡಿಸಿದವರು ನಮ್ಮ
ಪ್ರಧಾನಿ ನರೇಂದ್ರ ಮೋದಿ. ದೇಶದ ಬೊಕ್ಕಸದಿಂದ ಒಂದೇ ಒಂದು ರೂ. ಕೂಡ ದುರ್ಬಳಕೆ ಆಗದಂತೆ ತಡೆದು ಭ್ರಷ್ಟಾಚಾರಕ್ಕೆ
ಸಂಪೂರ್ಣ ಕಡಿವಾಣ ಹಾಕಿದವರು ಪ್ರಧಾನಿ ಮೋದಿ. ಭಾರತದ ಭದ್ರತೆಯ ವಿಚಾರದಲ್ಲಿ ಕಿಂಚಿತ್ತೂ ರಾಜಿಯಿಲ್ಲದೆ ದೇಶದ ಶತ್ರುಗಳನ್ನು
ಮಟ್ಟಹಾಕಿದವರು ಮೋದಿ. ಇಂತಹ ನಾಯಕನನ್ನು ನಾವು ಉಳಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬ ದೇಶಪ್ರೇಮಿಯ ಧರ್ಮ ಎಂದು ವಿಧಾನ ಪರಿಷನ್ ಮಾಜಿ ಸದಸ್ಯ ವಿ. ಭಾನುಪ್ರಕಾಶ್ ಹೇಳಿದರು.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಲಾದ ಕೈಗಾರಿಕಾ ಪ್ರಕೋಷ್ಠದ ಸಮಾವೇಶದಲ್ಲಿ ಮಾತನಾಡಿದ ಅವರು ‘ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಭಾರತದ ಒಳಗೆ ಹಾಗೂ ಹೊರಗೆ ಆದ ಪರಿವರ್ತನೆಗಳನ್ನು ಗಮನಿಸಬೇಕು. ಭಾರತದ ಒಳಗೆ ದೇಶ ಮತ್ತಷ್ಟು ಬಲಿಷ್ಠವಾಗಿದ್ದರೆ ವಿದೇಶಗಳಲ್ಲಿ ಭಾರತದ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಗೌರವ ಹೆಚ್ಚಾಗಿದೆ. ಭಾರತವನ್ನು ಇಂದು ಜಗತ್ತು ನೋಡುವ ದೃಷ್ಟಿ ಬದಲಾಗಿದೆ. ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಕಾಲ ಭಾರತದ ಪಾಲಿಗೆ ಬಂದಿದೆ ಎಂದು ಅವರು ಹೇಳಿದರು.
ಬಲಿಷ್ಠ ಭಾರತದ ನಿರ್ಮಾಣದಲ್ಲಿ ರೈತ, ಕಾರ್ಮಿಕ ಮತ್ತು ಸೈನಿಕರ ಪಾತ್ರವನ್ನು ಪ್ರಧಾನಿ ಮೋದಿ ಮನಗಂಡಿದ್ದಾರೆ. ಹೀಗಾಗಿಯೇ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮಾಜಿ ಸೈನಿಕರಾದ ಕ್ಯಾಪ್ಟನ್ ಬೃಜೇಶ್ ಚೌಟರಿಗೆ ಅವಕಾಶ ನೀಡಿದ್ದಾರೆ.
ಅವರನ್ನು ಜನತೆ ಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಿ ಕಳಿಸುವ ಮೂಲಕ ಮೋದಿ ಅವರಿಗೆ ಬಲ ತುಂಬಬೇಕಿದೆ ಎಂದು
ಭಾನುಪ್ರಕಾಶ್ ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಪ್ರಕೋಷ್ಠಗಳ ಸಹ ಸಂಚಾಲಕ ಪ್ರಸನ್ನ ದರ್ಭೆ, ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬೃಜೇಶ್ ಚೌಟ, ಕೈಗಾರಿಕಾ ಪ್ರಕೋಷ್ಠದ ಸಂಚಾಲಕ ಸತೀಶ್ ಕರ್ಕೇರ ಉಪಸ್ಥಿತರಿದ್ದರು..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net