ಕ್ರೀಡೆಯಿಂದ ಶಿಸ್ತು ಬದ್ಧ ಜೀವನ -ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ

mng-31dec-bhandari sports
Published on




ಮಂಗಳೂರು : ಕ್ರೀಡೆಯ ಮುಖಾಂತರ ಶಿಸ್ತು ಬದ್ಧ ಜೀವನ ನಡೆಸಲು ಸಾಧ್ಯ . ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗಿ ಆತ್ಮಸ್ಥೈರ್ಯ ಹೆಚ್ಚುತ್ತದೆ . ಮಾನಸಿಕ ಖಿನ್ನತೆಯಿಂದ ದೂರವಾಗಲು ಕ್ರೀಡೆ ಸ್ಪೂರ್ತಿಯಾಗುತ್ತದೆ ಎಂದು ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು
ಭಂಡಾರಿ ಸ್ವಯಂ ಸೇವಕ ಸಂಘ ಮತ್ತು ಭಂಡಾರಿ ಸಮಾಜ ಸಂಘ ಮಂಗಳೂರು ವತಿಯಿಂದ ನಗರದ ಪದವು
ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆದ ಭಂಡಾರಿ ಸಮಾಜ ಬಾಂಧವರ 28ನೇ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನ ಸಂಘದ ಅಧ್ಯಕ್ಷೆ ರಾಜೀವಿ ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತೆ ಧನ್ಯಶ್ರೀ ಕ್ರೀಡಾ ಜ್ಯೋತಿ ಪ್ರಜ್ವಲನೆಗೊಳಿಸಿದರು. ಕ್ರೀಡಾಪಟು ಅನ್ವಿತ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ. ರಾಧಿಕಾ ಸಿ. ನೆರವೇರಿಸಿದರು.
ಸಮಾರೋಪ ಸಮಾರಂಭದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಎಂಎಲ್‌ಸಿ ಐವನ್ ಡಿಸೋಜ,ವಕೀಲ ಮನೋರಾಜ್ ರಾಜೀವ್, ಭಂಡಾರಿ ಮಹಾಮಂಡಲದ ಅಧ್ಯಕ್ಷ ಶಶಿಧರ್ ಕಾರ್ಕಳ, ಉದ್ಯಮಿ ಧನಂಜಯ ಪಾಲ್ಕೆ, ಕಾರ್ಪೋರೇಟರ್
ಪ್ರವೀಣ್‌ಚಂದ್ರ ಆಳ್ವ ,ಉಪನ್ಯಾಸಕಿ ಕವಿತಾ ಮುರುಗೇಶ್ , ಮಂಗಳೂರು ಭಂಡಾರಿ ಸ್ವಯಂಸೇವಕ ಸಂಘದ ಅಧ್ಯಕ್ಷ ಮುರಳಿಧರ ಭಂಡಾರಿ, ಉದ್ಯಮಿ ರತ್ನಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ , ಕಚ್ಚೂರು ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ ಕುಳಾಯಿ ಸಂಘದ ಮಾಜಿ ಕಾರ್ಯದರ್ಶಿ ಶ್ರೀಧರ್ ಕಣ್ಣೂರು ಇವರನ್ನು ಸನ್ಮಾನಿಸಲಾಯಿತು ಭಂಡಾರಿ ಸ್ವಯಂ ಸೇವಕ ಸಂಘದ ಕಾರ್ಯದರ್ಶಿ ಸುಮತಿ ಮಾರ್ಲಾಡಿ ಸ್ವಾಗತಿಸಿ, ಅನಿತಾ ಅಮರನಾಥ್ ವಂದಿಸಿದರು. ಸಂಪತ್ ಬೊಂದೇಲ್ ಮತ್ತು ಧನ್ಯ ಹರೀಶ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net