

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಂಪಾಷ್ಠಿ ನಿಮಿತ್ತ ನಗರದ ಕಲಘಟಗಿ ರಸ್ತೆ ಮೈಲಾರಲಿಂಗ ನಗರದಲ್ಲಿನ ಸ್ವಯಂ ಸಿದ್ಧ ಮೈಲಾರಲಿಂಗ ದೇವಸ್ಥಾನದಲ್ಲಿ ಡಿ. 7ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ ಶ್ರೀ ಮೈಲಾರಲಿಂಗ ದೇವರಿಗೆ ಅಭಿಷೇಕ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ಮೈಲಾರಲಿಂಗ ದೇವರ ಭಂಡಾರ ಪೂಜೆ ಹಾಗೂ ಶ್ರೀ ಮಾಲ್ಹಸಾದೇವಿಗೆ ಕುಂಕುಮಾರ್ಚನೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.