ಮದ್ಯದ ಅಮಲಿನಲ್ಲಿ ಭಾಮೈದುನನ ಕೊಲೆ

Crime Logo
Published on

ಮೈಸೂರು: ಹಣಕಾಸು ವಿಷಯದಲ್ಲಿ ಜಗಳ ತೆಗೆದು ಮದ್ಯದ ಅಮಲಿನಲ್ಲಿ ಭಾಮೈದುನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಪಿರಿಯಾಪಟ್ಟಣದ ಈಡಿಗರ ಬೀದಿ ವಾಸಿ ಮನೋಜ್ (26) ತನ್ನ ಬಾಮೈದ ವಿನೋದ್‌ನಿಂದ ಕೊಲೆಯಾದವರು. ಕೊಲೆ ಬಳಿಕ ವಿನೋದ್ ಪರಾರಿಯಾಗಿದ್ದು, ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.
ನಗರದ ಕುಂಬಾರ ಕೊಪ್ಪಲು ಗೇಟ್ ಬಳಿಯ ಲಾಡ್ಜ್‌ನಲ್ಲಿ ಭಾನುವಾರ ಇಬ್ಬರು ಉಳಿದುಕೊಂಡಿದ್ದರು. ಆ ವೇಳೆ ಹಣಕಾಸು ವಿಷಯವಾಗಿ ಜಗಳ ಆರಂಭಗೊಂಡು ವಿಕೋಪಕ್ಕೆ ತಿರುಗಿ ಮನೋಜ್‌ನನ್ನು ವಿನೋದ್ ಮಚ್ಚಿನಿಂದ ಮುಖವನ್ನು ಕೊಚ್ಚಿ, ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಕುಟುಂಬದವರು ನೀಡಿದ ದೂರಿನ ಮೇರೆಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net