ಭಾಮಾ ಫಿಲಾಟೆಲಿ ಗ್ಯಾಲರಿ ಉದ್ಘಾಟನೆ

kodavoor
Published on

ಉಡುಪಿ: ದೇಶದ ಇತಿಹಾಸ, ಆಗುಹೋಗು ಹಾಗು ಮಹತ್ವವನ್ನು ಅಂಚೆ ಚೀಟಿ ಸಾರುತ್ತದೆ. ಅಂಚೆ ಚೀಟಿ ಸಂಗ್ರಹ ಅತ್ಯುತ್ತಮ ಹವ್ಯಾಸ ಎಂದು ಉಡುಪಿ ಜಿಲ್ಲಾ ಅಂಚೆ ಅಧೀಕ್ಷಕ ನವೀನ್ ಚಂದರ್ ಹೇಳಿದರು.

ಭಾರತೀಯ ಅಂಚೆ ಇಲಾಖೆ ಮತ್ತು ಉಡುಪ ರತ್ನ ಪ್ರತಿಷ್ಠಾನದ ಪ್ರಯೋಗದಲ್ಲಿ ಕೊಡವೂರಿನಲ್ಲಿ ಉಡುಪಿ ಅಂಚೆ ಇಲಾಖೆ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರ ಭಾಮಾ ಫಿಲಾಟೆಲಿ ಗ್ಯಾಲರಿಯನ್ನು ಉದ್ಘಾಟಿಸಿ ಮಾತನಾಡಿದರು. ಅಂಚೆ ಸಪ್ತಾಹದ ಸಂದರ್ಭ ಫಿಲಾಟೆಲಿ ದಿನದಂದು ಗ್ಯಾಲರಿ ಲೋಕಾರ್ಪಣೆಗೊಳ್ಳುತ್ತಿರುವ ಈ ಗ್ಯಾಲರಿ ನಮ್ಮ ಅಂಚೆ ಇಲಾಖೆಗೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.

ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಅಂಚೆಚೀಟಿ ಸಂಗ್ರಾಹಕ ಸಂದೀಪ್ ಕುಮಾರ್ ಅವರನ್ನು ಫಿಲಾಟಲಿ ದಿನದ ಪ್ರಯುಕ್ತ ಗೌರವಿಸಲಾಯಿತು. ಅಂಚೆ ಉಪ ಅಧೀಕ್ಷಕ ಧನಂಜಯ ಆಚಾರ್, ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಮೆಮೋರಿಯಲ್ ಗ್ಯಾಲರಿ ವ್ಯವಸ್ಥೆ ಮೇಲ್ವಿಚಾರಕ ಜಯಪ್ರಕಾಶ್ ರಾವ್, ಶಂಕರನಾರಾಯಣ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ., ಬ್ರಾಹ್ಮಣ ಮಹಾಸಭಾ ಕೊಡವೂರು ವಲಯದ ಅಧ್ಯಕ್ಷ ಕೆ.ನಾರಾಯಣ ಬಲ್ಲಾಳ್, ಕಟ್ಟಡ ನಿರ್ಮಾಣ ಅಭಿಯಂತರ ವಿಶ್ವನಾಥ್ ಭಟ್, ಕಲಾವಿದ ರಾಮಾಂಜಿ ಉಪಸ್ಥಿತರಿದ್ದರು.

ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ ಪ್ರಸ್ತಾವಿಸಿದರು. ನರಸಿಂಹ ನಾಯಕ್ ವಂದಿಸಿದರು. ಜನಾರ್ದನ್ ಕೊಡವೂರು ನಿರೂಪಿಸಿದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net