ವಿಶ್ವದಾದ್ಯಂತ ಡಾ.ಜತ್ತಿ ಬಸವತತ್ವ ಪ್ರಚಾರ

14blk2
ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ ಬೆಂಗಳೂರು ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ದಂಪತಿಯನ್ನು ಸನ್ಮಾನಿಸಲಾಯಿತು. ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಇತರರಿದ್ದರು.
Published on

ಭಾಲ್ಕಿ: ಬಸವತತ್ವ ಪ್ರಚಾರ-ಪ್ರಸಾರಕ್ಕೆ ಬಸವ ಸಮಿತಿ ಅಧ್ಯಕ್ಷ ಡಾ.ಅರವಿಂದ ಜತ್ತಿ ಜೀವನ ಮುಡಿಪಾಗಿಟ್ಟಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಶ್ಲಾಘಿಸಿದರು.

ಹಿರೇಮಠ ಸಂಸ್ಥಾನದಲ್ಲಿ ಸೋಮವಾರ ಡಾ.ಅರವಿಂದ ಜತ್ತಿ ದಂಪತಿಯನ್ನು ಸನ್ಮಾನಿಸಿ ಆಶೀರ್ವದಿಸಿದ ಶ್ರೀಗಳು, ಡಾ.ಜತ್ತಿ ಬಸವ ಸಮಿತಿ ಅಧ್ಯಕ್ಷರಾಗಿ ಬಸವಾದಿ ಶರಣರ ತತ್ವ ಪ್ರಸಾರ ಕಾರ್ಯ ನಿರಂತರ ಮಾಡುತ್ತಿದ್ದಾರೆ. ಶರಣರ ವಚನ ಸಾಹಿತ್ಯವನ್ನು ದೇಶ-ವಿದೇಶದ ೩೬ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುವ ಮೂಲಕ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುತ್ತಿದ್ದಾರೆ. ಶರಣ ಸಾಹಿತ್ಯ ಕುರಿತು ಅನೇಕ ಭಾಷೆಗಳಲ್ಲಿ ನಿಯತಕಾಲಿಕೆಗಳನ್ನು ಪ್ರಕಟಿಸಿ ಬಸವ ಪ್ರಜ್ಞೆ ಮೂಡಿಸುತ್ತಿದ್ದಾರೆ. ಇವರ ಈ ಸೇವೆ ಗುರುತಿಸಿ ಧಾರವಾಡ ಹಾಗೂ ಕಲಬುರಗಿ ಶರಣಬಸವೇಶ್ವರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಿರುವುದು ಅತ್ಯಂತ ಸಂತಸದ ವಿಷಯ ಎಂದರು.

ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಡಾ.ಕಲ್ಯಾಣರಾವ ಪಾಟೀಲ್, ಡಾ.ಶಿವರಾಜ ಶಾಸ್ತ್ರಿ ಹೆರೂರ, ಡಾ.ಲಕ್ಷ್ಮೀಕಾಂತ ಪಾಂಚಾಳ ಬಾಗಲಕೋಟ, ಸಿದ್ದಯ್ಯ ಕಾವಡಿಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net