ಹಕ್ಕು ಚಲಾಯಿಸಿದ ಪೂಜ್ಯರು, ಗಣ್ಯರು

7blk2
ಭಾಲ್ಕಿಯ ಹಳೇ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ೧೧೪ರ ಮತಗಟ್ಟೆಯಲ್ಲಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಮತದ ಹಕ್ಕು ಚಲಾಯಿಸಿದರು.
Published on

ಭಾಲ್ಕಿ: ಬೀದರ್ ಲೋಕಸಭಾ ಚುನಾವಣೆಗೆ ಪಟ್ಟಣದ ೨೮ ಸೇರಿ ತಾಲೂಕಿನ ೨೬೩ ಮತಗಟ್ಟೆಗಳಲ್ಲಿ ಬೆಳಗ್ಗೆ ೭ರಿಂದ ಸಂಜೆ ೬ರವರೆಗೆ ಮಂಗಳವಾರ ಬಿರುಸಿನ ಮತದಾನ ನಡೆಯಿತು. ಬೆಳಗ್ಗೆ ೧೧ರವರೆಗೆ ಬಹುತೇಕ ಕಡೆ ಮತದಾರರು ಸರತಿ ಪ್ರಕಾರ ಉತ್ಸಾಹದಿಂದ ಮತದಾನ ಮಾಡಿದರು.

ಮಧ್ಯಾಹ್ನ ೧೨ರಿಂದ ಸಂಜೆ ೪ರವರೆಗೆ ಬಿಸಿಲಿನ ಪ್ರಖರತೆ ಹೆಚ್ಚಿದ್ದರಿಂದ ಬೂತ್‌ಗಳಲ್ಲಿ ಮತದಾರರ ಸಂಖ್ಯೆ ಕಮ್ಮಿಯಾಗಿತ್ತು. ಅಂಗವಿಕಲರು ಕುಟುಂಬದವರ ಸಹಾಯದಿಂದ ವೀಲ್ ಚೇರ್‌ನಲ್ಲಿ ಬಂದು ಹಕ್ಕು ಚಲಾಯಿಸಿದರು.

ಹಳೇ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬೂತ್ ೧೧೪ರಲ್ಲಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಮತದ ಹಕ್ಕು ಚಲಾಯಿಸಿದರು. ಸಿದ್ಧೇಶ್ವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮಪ್ಪ ಕನಕಟ್ಟೆ ಕುಟುಂಬ ಸದಸ್ಯರೊಂದಿಗೆ ಮತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net