

ಭಾಲ್ಕಿ: ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ನಡೆದಿದ್ದ ಮೋಟಾರ್ ಸೈಕಲ್ ಕಳವು ಪ್ರಕರಣಗಳನ್ನು ಭಾನುವಾರ ಭೇದಿಸಿದ ಧನ್ನೂರ(ಎಚ್) ಠಾಣೆ ಪೊಲೀಸರು, ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತರಾದ ಬಳತ್(ಬಿ)ನ ಸಂದೀಪ ಮಳಚಾಪುರೆ, ಸಿದ್ಧೇಶ್ವರದ ನಾಗೇಶ ಮೈಬತೆ ಮತ್ತು ಡೊಣಗಾಪುರದ ಸೋಹಲ್ ಫಯಾಜೋದ್ದಿನ್ ಮುಲ್ಲಾ ಅವರಿಂದ ೯.೧೫ ಲಕ್ಷದ ೧೬ ಬೈಕ್‌ಗಳನ್ನು ವಶಪಡಿಸಿಕೊಂಡು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧನ್ನೂರ(ಎಚ್) ಪಿಎಸ್‌ಐ ವಿಶ್ವಾರಾಧ್ಯ ನೇತೃತ್ವದಲ್ಲಿ ಮಹಾರಾಷ್ಟ್ರದ ಶಾಜಾನಿ ಔರಾದ್‌ನಲ್ಲಿ ನಾಲ್ಕು ಹಾಗೂ ಜಿಲ್ಲೆಯ ವಿವಿಧೆಡೆ ದಾಖಲಾಗಿದ್ದ ೧೧ ಬೈಕ್ ಕಳವು ಪ್ರಕರಣಗಳನ್ನು ಭೇದಿಸಲಾಗಿದೆ.
ಕಟ್ಟಿತುಗಾಂವ ಗ್ರಾಮದಲ್ಲಿ ಕಳೆದ ಏಪ್ರಿಲ್‌ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾದ ಬಗ್ಗೆ ಸಂತೋಷ ಮಹಾಂತಪ್ಪ ನೀಡಿದ ದೂರಿನನ್ವಯ ಕೇಸ್ ದಾಖಲಿಸಿ ತನಿಖೆ ನಡೆಸಿದಾಗ ಈ ಎಲ್ಲ ಪ್ರಕರಣಗಳು ಬೆಳಕಿಗೆ ಬಂದಿವೆ.
ಎಎಸ್‌ಐ ವಿಠ್ಠಲರಾವ, ವೀರಶೆಟ್ಟಿ ಪಾಟೀಲ್, ಸಿಎಚ್‌ಸಿ ಉಮಾಕಾಂತ ದಾನಾ, ನಾಗಪ್ಪ, ಬಕ್ಕಯ್ಯ, ಭಗವಾನ, ಸಂಜೀವ ಸಿರ್ಸೆ, ಸಿಪಿಸಿ ಹರ್ಷವರ್ಧನ, ನಾಗರಾಜ, ಸಿದ್ದಲಿಂಗಪ್ಪ, ಪ್ರಶಾಂತ ರೆಡ್ಡಿ, ಶಿವಕುಮಾರ, ನಾಗರಾಜ, ಗುರುರಾಜ, ಬಸಪ್ಪ, ಮಹಾದೇವ, ಎಪಿಸಿ ಜಗದೀಶ ಮಾನಶೆಟ್ಟಿ, ತಾನಾಜಿ ಕಾರ್ಯಾಚರಣೆ ತಂಡದಲ್ಲಿದ್ದರು.