ಪ್ರತಿ ಗ್ರಾಮದಲ್ಲಿ ವಿಶೇಷ ಸಾಹಿತ್ಯ ಸೌರಭ

31blk3
ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಭಾತಂಬ್ರಾದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿದರು. ಮಲ್ಲಿಕಾರ್ಜುನ ಹಲಮಂಡಗೆ, ಕಾಶೀನಾಥ ಲದ್ದೆ, ಸಂತೋಷ ಬಿಜಿ ಪಾಟೀಲ್, ಶರಣಪ್ಪ ರಾಚೋಟೆ, ಮಹಾದೇವ ಬೇಲೂರೆ, ದೀಪಕ ಥಮಕೆ, ಜಯರಾಜ ದಾಬಶೆಟ್ಟಿ ಇದ್ದರು.
Published on

ಭಾಲ್ಕಿ: ಕನ್ನಡ ರಾಜ್ಯೋತ್ಸವ ಸುವರ್ಣ ಸಂಭ್ರಮ ನಿಮಿತ್ತ ನವೆಂಬರ್‌ನಲ್ಲಿ ನಿತ್ಯ ಪ್ರತಿ ಗ್ರಾಮದಲ್ಲಿ ವಿಶೇಷ ಸಾಹಿತ್ಯ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ತಿಳಿಸಿದರು.

ಭಾತಂಬ್ರಾದಲ್ಲಿ ಮಂಗಳವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಗ್ರಾಮೀಣ ಭಾಗಕ್ಕೆ ಕನ್ನಡ ಸಾಹಿತ್ಯ ಕೊಂಡೊಯ್ಯುವ ನಿಟ್ಟಿನಲ್ಲಿ ಗುರುವಾರ ಭಾತಂಬ್ರಾದ ನ್ಯಾಷನಲ್ ಪ್ರೌಢಶಾಲೆಯಲ್ಲಿ ವಿಶೇಷ ಸಾಹಿತ್ಯ ಸೌರಭ ನಡೆಯಲಿದೆ. ನಿತ್ಯ ಸಂಜೆ ೬ರಿಂದ ೮ರವರೆಗೆ ಕಾರ್ಯಕ್ರಮ ನಡೆಸಲು ೩೦ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಕಸಾಪ ತಾಲೂಕು ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಉಪಾಧ್ಯಕ್ಷ ಕಾಶೀನಾಥ ಲದ್ದೆ, ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ಶರಣಪ್ಪ ರಾಚೋಟೆ, ಮಹಾದೇವ ಬೇಲೂರೆ, ದೀಪಕ ಥಮಕೆ, ಜಯರಾಜ ದಾಬಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net