ಭಕ್ತಿ ಸಂಗೀತ ಪರ್ವ 17ರಂದು

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಷಾಢ ಶುದ್ಧ ಏಕಾದಶಿ ನಿಮಿತ್ತ ನಗರದ ದೇಸಾಯಿಗಲ್ಲಿ ವಿಠ್ಠಲ ಮಂದಿರದಲ್ಲಿ ಜು. 17ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಸಂಗೀತ ಪರ್ವ ಸಮರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಪುರಂದರ ಮಂಟಪದ ವಿದ್ವಾನ್​ ಗೋವಿಂದರಾವ್​ ನವಲಗುಂದ, ಹಿರಿಯ ಸಾಹಿತಿ ಶ್ಯಾಮಸುಂದರ ಬಿದರಕುಂದಿ, ಡಾ. ಜಿ.ಎಂ.ಹೆಗಡೆ, ಸಂಗೀತಗಾರರಾದ ಡಾ. ಪ್ರಸನ್ನ ಗುಡಿ, ಡಾ. ಶ್ರೀಧರ ಕುಲಕರ್ಣಿ, ಆನಂದ ಕಮಲಾಪುರ, ಡಾ. ಎಚ್​.ಎ. ಕಟ್ಟಿ, ಡಾ. ದೀಪಕ ಆಲೂರ ಆಗಮಿಸಲಿದ್ದಾರೆ. ವಿಜಯರಾಯರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ಎನ್​.ಆರ್​. ಕುಲಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈಗಾಗಲೇ ಹೆಸರು ನೋಂದಾಯಿಸಿದ ಭಜನಾ ಮಂಡಳಿ ಸದಸ್ಯರು ಸಮಯಕ್ಕೆ ಸರಿಯಾಗಿ ಆಗಮಿಸಿ ಗಾಯನ ಪ್ರಸ್ತುತಪಡಿಸಬೇಕು. ಜು. 22ರಂದು ಶ್ರೀ ವಿಠ್ಠಲ ದೇವರಿಗೆ ಗೋಪಾಳ ಕಾವಲಿ ಸಮರ್ಪಣೆ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಗೌರವ ಅಧ್ಯಕ್ಷ ಎಸ್​.ಬಿ. ಗುತ್ತಲ, ಗೌರವ ಕಾರ್ಯದರ್ಶಿ ಕೆ. ಆರ್​. ದೇಸಾಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net