

ಹುಬ್ಬಳ್ಳಿ: ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜೂ. 13ರಂದು ಸಂಜೆ 6 ಗಂಟೆಯಿಂದ 7.30 ರವರಗೆ ದಾಸವಾಣಿ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಾಟಾಗಿದೆ.
ಸುಮಂಗಲಾ ಸುತಾರ ಮತ್ತು ಕವಿತಾ ಹೊಸೂರು ಭಕ್ತಿ ಸಂಗೀತ ನೀಡುವರು. ಮನುಕುಮಾರ ಹಿರೇಮಠ, ರಾಘವೇಂದ್ರ ನಾಕೋಡ ತಬಲಾ, ಮಂಜು ಗೋಕುಲ ಹಾರ್ಮೋನಿಯಂ ಸಾಥ್ ನೀಡುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.