ಧರ್ಮ ಜತೆಗಿದ್ದರೆ ಸಮಾಜ ಪರಿಪೂರ್ಣ : ಕೃಷ್ಣರಾಜ ಕುತ್ಪಾಡಿ ಹೇಳಿಕೆ

New Project (12)
Published on

ಬೆಳ್ತಂಗಡಿ : ನಮ್ಮ ಮುಂದಿನ ಬದುಕು ಸುಂದರ, ಸುಖಮಯವಾಗಿರಲು ಭಕ್ತಿ ಮಾರ್ಗವೊಂದೇ ಪ್ರಮುಖ ಸಾಧನ. ಧರ್ಮ, ದೇಶ ಜತೆಗಿದ್ದರೆ ಮಾತ್ರ ಸಮಾಜ ಪರಿಪೂರ್ಣ. ಧರ್ಮ ಆತ್ಮವಿದ್ದಂತೆ, ದೇಶ ದೇಹವಿದ್ದಂತೆ, ಅವೆರಡರ ಸಮ್ಮಿಲನದಿಂದ ಸುಸ್ಥಿತ ಸಮಾಜ ನಿರ್ಮಾಣ ಸಾಧ್ಯ ಎಂದು ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಹೇಳಿದರು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನ ರಥಬೀದಿಯಲ್ಲಿ ಉಡುಪಿ ಪೇಜಾವರ ಮಠ, ವಿಶ್ವ ಹಿಂದು ಪರಿಷತ್, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಿಂದ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಭಕ್ತಿ ಸಿದ್ಧಾಂತೋತ್ಸವ-ರಾಮೋತ್ಸವ ಪ್ರಯುಕ್ತ ಆಚಾರ್ಯ ಮಧ್ವರ ಜನ್ಮಭೂಮಿ ಪಾಜಕ ಕ್ಷೇತ್ರದಿಂದ ಹೊರಟ ಭಕ್ತಿ ರಥಯಾತ್ರೆಗೆ ಉಜಿರೆಯ ನಾಗರಿಕರು ಸ್ವಾಗತ ನೀಡಿ ಮಾತನಾಡಿದರು.

ಭಕ್ತಿರಥಯಾತ್ರೆಗೆ ಉಜಿರೆ ಮುಖ್ಯ ವೃತ್ತದ ಬಳಿ ಶ್ರೀ ಜನಾರ್ದನ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮಾಲಾರ್ಪಣೆಗೈದು, ಅರ್ಚಕರು ಮಂಗಳಾರತಿ ಬೆಳಗಿದರು. ಅಲ್ಲಿಂದ ಚೆಂಡೆ ವಾದ್ಯಮೇಳದ ಮೆರವಣಿಗೆಯಲ್ಲಿ ಉಜಿರೆ ನಾಗರಿಕರು ಭಕ್ತಿ ರಥವನ್ನು ಸ್ವಾಗತಿಸಿ ದೇವಸ್ಥಾನ ಮುಂಭಾಗಕ್ಕೆ ಕರೆತಂದರು. ಅಲ್ಲಿ ದೇವಸ್ಥಾನದ ವತಿಯಿಂದ ಮಂಗಳಾರತಿ ನಡೆಯಿತು. ಭಕ್ತವೃಂದ ಸಾಮೂಹಿಕ ರಾಮ ತಾರಕ ಮಂತ್ರ ಪಠಿಸಿದರು.

ಉಡುಪಿ ಪೇಜಾವರ ಮಠದ ವತಿಯಿಂದ ನಂದಳಿಕೆ ವಿಠಲ ಭಟ್, ಶಶಾಂಕ ಭಟ್, ರಾಘವೇಂದ್ರ ಭಟ್ ಮಠ ಮದ್ದಡ್ಕ, ಶಿವಳ್ಳಿ ಬ್ರಾಹ್ಮಣ ಸಂಘ ಜಿಲ್ಲಾಧ್ಯಕ್ಷ ಡಾ.ಎಂ.ಎಂ.ದಯಾಕರ್, ತುಳು ಶಿವಳ್ಳಿ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೋಲ್ನಾಯ, ಉಜಿರೆ ವಲಯಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಕಾರ್ಯದರ್ಶಿ ಹರ್ಷಕುಮಾರ್ ಕೆ.ಎನ್., ವಲಯ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಗುರುರಾಜ್, ಯುವ ವಿಪ್ರ ವೇದಿಕೆ ಅಧ್ಯಕ್ಷ ಸೂರ್ಯನಾರಾಯಣ ಮುರುಡಿತ್ತಾಯ, ವರ್ತಕ ಸಂಘ ಅಧ್ಯಕ್ಷ ಅರವಿಂದ ಕಾರಂತ್, ಮುರಳಿಕೃಷ್ಣ ಆಚಾರ್, ರವಿ ಚೆಕ್ಕಿತ್ತಾಯ, ಅನಂತಕೃಷ್ಣ ಪಡುವೆಟ್ನಾಯ, ವೆಂಕಟ್ರಮಣ ರಾವ್, ರವೀಂದ್ರ ಶೆಟ್ಟಿ ಬಳಂಜ, ಭರತ್ ಕುಮಾರ್, ಪದ್ಮನಾಭ ಶೆಟ್ಟಿಗಾರ್, ಮೋಹನ ಶೆಟ್ಟಿಗಾರ್, ಶ್ರೀನಿವಾಸ್ ರಾವ್, ನವೀನ ನೆರಿಯ, ಶಶಿರಾಜ್ ಶೆಟ್ಟಿ, ಸಂಪತ್ ಸುವರ್ಣ, ಶೈಲಜಾ ಪೆಜತ್ತಾಯ, ಸರೋಜಾ ಕೆದಿಲಾಯ ಮೊದಲಾದವರಿದ್ದರು.

ಭಕ್ತಿ ರಥ ಯಾತ್ರೆಯಲ್ಲಿ ಆರಾಧಿಸಲ್ಪಟ್ಟ ಸೀತಾರಾಮಚಂದ್ರ ದೇವರನ್ನು ರಾತ್ರಿ ಶ್ರೀ ಜನಾರ್ದನ ದೇವಸ್ಥಾನದ ಮಂಟಪದಲ್ಲಿರಿಸಿ, ಶುಕ್ರವಾರ ಬೆಳಗ್ಗೆ ಅರ್ಚಕರಿಂದ ಹೋಮ, ಪೂಜೆ ಬಳಿಕ ರಥಯಾತ್ರೆಯನ್ನು ಗೌರವದಿಂದ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net