

ಕಟೀಲು: ಹಿಂದು ಧರ್ಮದ ಪುನರುತ್ಥಾನಗೊಳಿಸುವ ಹಾಗೂ ಜನರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿ ಮೂಡಿಸುವುದು ರಾಮೋತ್ಸವ ಭಕ್ತಿ ರಥಯಾತ್ರೆಯ ಕಲ್ಪನೆಯಾಗಿದೆ. ಅದನ್ನು ಸಾಕಾರಗೊಳಿಸುವಲ್ಲಿ ನಾವು ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಧಾರ್ಮಿಕ ಮುಖಂಡ, ಚಿಂತಕ ಕುತ್ಪಾಡಿ ಕೃಷ್ಣರಾಜ ಆಚಾರ್ಯ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸರಸ್ವತೀ ಸದಸನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಾತನಾಡಿದರು.
ಕಟೀಲು ಕ್ಷೇತ್ರಕ್ಕೆ ಆಗಮಿಸಿದ ಭಕ್ತಿ ರಥಯಾತ್ರೆಯನ್ನು ಸ್ವಾಗತಿಸಲಾಯಿತು. ದೇವಸ್ಥಾನ ಅರ್ಚಕರಾದ ವಾಸುದೇವ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಪೇಜಾವರ ಮಠದ ವಿಠಲ್ ಭಟ್, ಶಶಾಂಕ್ ಭಟ್, ಧಾರ್ಮಿಕ ಪರಿಷತ್ ಸದಸ್ಯ ಸುಬ್ರಹ್ಮಣ್ಯ ಭಟ್ ಕೊರಿಯಾರ್ ಶಿಬರೂರು, ಬಪ್ಪನಾಡು ದೇವಾಸ್ಥನ ಅರ್ಚಕ ಶ್ರೀಪತಿ ಉಪಾಧ್ಯಾಯ, ಧಾರ್ಮಿಕ ಮುಖಂಡ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ದೊಡ್ಡಯ್ಯ ಮೂಲ್ಯ ಕಟೀಲ್, ಪುನೀತ್ ಮತ್ತಿತರರು ಉಪಸ್ಥಿರಿದ್ದರು. ಹರಿನಾರಾಯಣ ಆಸ್ರಣ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.