ಭಕ್ತಿ ಎನ್ನುವುದು ವ್ಯಾಪಾರವಲ್ಲ, ಭಗವಂತನನ್ನು ಒಲಿಸಿಕೊಳ್ಳುವ ಸಾಧನ

17 nrp 5
Published on

ಎನ್.ಆರ್.ಪುರ: ಭಕ್ತಿ ಎನ್ನುವುದು ವ್ಯಾಪಾರದ ವಸ್ತುವಲ್ಲ, ಅದು ಭಗವಂತನನ್ನು ಒಲಿಸಿಕೊಳ್ಳಲು ಇರುವ ಸಾಧನ ಎಂದು ವನವಾಸಿ ಕಲ್ಯಾಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಮಣಿವಣ್ಣನ್ ಹೇಳಿದರು.

ಭಾನುವಾರ ಪಟ್ಟಣದ ಉಮಾಮಹೇಶ್ವರ ಸಮುದಾಯ ಭವನದಲ್ಲಿ ಶಾಶ್ವತಿ ಮಹಿಳಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ರಾಣಿ ದುರ್ಗಾವತಿ 500ನೇ ಜಯಂತಿ ಹಾಗೂ ಭಗವಾನ್ ಬಿರ್ಸಾ ಮುಂಡಾಜಯಂತಿ ಕಾರ್ಯಕ್ರಮದ ಪ್ರಯುಕ್ತ ನಡೆದ ಭಜನಾ ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಭಗವಂತನ ಸ್ಮರಣೆ, ಭಜನೆಯಿಂದ ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ದೊರಕುತ್ತದೆ. ಮನುಷ್ಯ ತಾನು ಎಷ್ಟು ವರ್ಷ ಬದುಕಿದ್ದ ಎನ್ನುವುದಕ್ಕಿಂತ ಹೇಗೆ ಬದುಕಿದ ಎಂಬುವುದು ಮುಖ್ಯ. ಭಗವಾನ್ ಬಿರ್ಸಾ ಮುಂಡಾ ಆದಿವಾಸಿಗಳ ಸ್ವಾಭಿಮಾನದ ಪ್ರತೀಕವಾಗಿದ್ದಾರೆ. ರಾಣಿ ದುರ್ಗಾವತಿ ಮೊಘಲರ ವಿರುದ್ಧ ಹೋರಾಡಿ ತನ್ನ ಜನರ ಉಳಿವು ರಕ್ಷಣೆಗಾಗಿ ತನ್ನ ಪ್ರಾಣ ತ್ಯಾಗ ಮಾಡಿದ ತ್ಯಾಗಮಯಿಯಾಗಿದ್ದಾಳೆ. ಸಮರ್ಪಣೆ ಭಾವ, ತ್ಯಾಗ ಮನುಷ್ಯನ ಅವಿಭಾಜ್ಯ ಅಂಗವಾಗಬೇಕು ಎಂದರು.

ಜಿಲ್ಲಾ ಎಸ್ಸಿ , ಎಸ್ಟಿ ದೌರ್ಜನ್ಯ ನಿಯಂತ್ರಣ ಜಾಗೃತಿ ಸಮಿತಿ ಸದಸ್ಯ ಶೆಟ್ಟಿಕೊಪ್ಪ ಎಂ.ಮಹೇಶ್, ಭಾಗ್ಯಾ ನಂಜುಂಡಸ್ವಾಮಿ, ಜಯರಾಂ, ಮಂಜುಳಾ,ಭಾನುಮತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net