ಭಕ್ತಿ ಇದ್ದರೆ ಬದುಕು ಹಸನು

3
ಸಾವಿತ್ರಿ ಪಾಟೀಲ, ಭರತ ಕಲಾಚಂದ್ರ, ದುಂಡಪ್ಪ ಯಡಪ್ಪಗೋಳ, ಹರಿಶ್ಚಂದ್ರ ಪಾಟೀಲ, ಶಂಕರ ವಾಲಿಕರ, ಮಾರುತಿ ಕಾಮಗೌಡ, ರವೀಂದ್ರ ಕಮತೆ ಇತರರಿದ್ದರು. ಲಗಮಣ್ಣ ತೋರಣಹಳ್ಳಿ ನಿರೂಪಿಸಿದರು. ಸುಜಾತಾ ಮಗದುಮ್ಮ ವಂದಿಸಿದರು.
Published on

ಚಿಕ್ಕೋಡಿ: ಮನಸ್ಸಿನ ಭಾವನೆಗಳನ್ನು ಪರಮಾತ್ಮನ ಭಕ್ತಿಕಡೆಗೆ ಕರೆದುಕೊಂಡು ಹೋದಾಗ ಮಾತ್ರ ಬದುಕು ಹಸನಾಗುತ್ತದೆ ಎಂದು ಸದ್ಗುರು ಬಸವಪ್ರಭು ಮಹಾರಾಜರು ಹೇಳಿದರು.

ಮಜಲಟ್ಟಿಯ ಕಲೇಶ್ವರ ಅಲ್ಲಮಪ್ರಭು ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿವಮಹಾ ಪುರಾಣ ಮಂಗಲೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕಮತೇನಟ್ಟಿಯ ಹನುಮಂತ ಶಾಸ್ತ್ರಿ ಮಾತನಾಡಿ, ಪುರಾಣ ಕೇಳುವುದರಿಂದ ಜೀವನ ಮುಕ್ತಿಯಡೆಗೆ ಸಾಗುತ್ತದೆ ಎಂದರು. ಗುರುಭಕ್ತಿ ಮಂದಿರ ಸೇವೆ ಮಾಡಿದ ಮಾತೆಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net