

ಕುಂಬಳೆ: ಕಾಸರಗೋಡಿನ ರಂಗಚಿನ್ನಾರಿ ಸಾರಥ್ಯದಲ್ಲಿ ಸ್ಥಳೀಯ ಭಕ್ತಿರಸ ಸಮಿತಿ ಸಹಯೋಗದಲ್ಲಿ, ಗಾಯಕ ಶಂಕರ ಶಾನುಭೋಗ್ ಕಳಸ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರ ಸಮಾರೋಪಗೊಂಡಿತು.
ಅಂಕಣಕಾರ ರವೀಂದ್ರ ಜೋಶಿ ಮೈಸೂರು ಸಮಾರೋಪ ಭಾಷಣ ಮಾಡಿದರು. ಭಕ್ತಿರಸ ಸಮಿತಿ ಕಾರ್ಯಾಧ್ಯಕ್ಷ ಕಲಾರತ್ನ ಶಂನಾಡಿಗ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಜಲತರಂಗ ವಾದಕಿ ವಿಜಯಲಕ್ಷ್ಮೀ ಹರಿಪ್ರಕಾಶ್ ಬೆದ್ರಡಿ ಭಾಗವಹಿಸಿದ್ದರು.
ಭಜನಾಪಟು ರಂಗನಾಯಕ್ ಕುಂಬ್ಳೆ ಹಾಗೂ ಸಂಗೀತ ಶಿಕ್ಷಕಿ ಸಾವಿತ್ರಿ ಭಟ್ ದೊಡ್ಡಮಾಣಿ ಅವರನ್ನು ಸನ್ಮಾನಿಸಲಾಯಿತು. ಕಾಸರಗೋಡಿ ಚಿನ್ನಾ ಸ್ವಾಗತಿಸಿದರು. ಸಂಧ್ಯಾ ಕೇಶವ ಅಡಿಗ ವಂದಿಸಿದರು.ಶ್ರೀನಿವಾಸ ಕಳತ್ತೂರು ನಿರ್ವಹಿಸಿದರು. ಸುಮಾರು 650 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.