ಭೌತಿಕ ಚಿಂತನೆ ಅಧಿಕ; ಭಕ್ತಿ ಕ್ಷೀಣ

udp-7-ratha
Published on

ಉಡುಪಿ: ಭೌತಿಕತೆ ಬಗ್ಗೆ ಜನರು ಹೆಚ್ಚು ಆಸಕ್ತರಾಗಿರುವುದರಿಂದ ಭಕ್ತಿ ಣಿಸುತ್ತಿದೆ. ಆಧ್ಮಾತ್ಮಿಕತೆ ಜೀವನದಿಂದ ಮಾತ್ರ ಜಗತ್ತಿನಲ್ಲಿ ಕ್ಷೇಮ ಸಮೃದ್ಧಿ ಕಾಣಲು ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಪೆರಣಂಕಿಲದಲ್ಲಿ ಏ.9ರಿಂದ 12ರವರೆಗೆ ನಡೆಯಲಿರುವ ಭಕ್ತಿಸಿದ್ಧಾಂತೋತ್ಸವ ಮತ್ತು ರಾಮೋತ್ಸವದ ಅಂಗವಾಗಿ ಪಾಜಕದಿಂದ ಹೊರಟು ಮೂರು ಜಿಲ್ಲೆಗಳಲ್ಲಿ ಸಂಚರಿಸಿ ಉಡುಪಿಗೆ ಆಗಮಿಸಿದ ಭಕ್ತಿ ರಥಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಕ್ತಿಯಿಂದ ಭಗವಂತನ ಆರಾಧನೆ ಮಾಡಿದರೆ ಮಾತ್ರ ಮಳೆ, ಬೆಳೆಯಾಗಿ ಮನುಷ್ಯರಿಗೆ ಶ್ರೇಯಸ್ಸು ಲಭಿಸುತ್ತದೆ. ಯಜ್ಞ, ಯಾಗಾದಿಗಳಿಂದ ದೇವರು ಕೊಟ್ಟದ್ದನ್ನು ದೇವರಿಗೆ ಪ್ರತ್ಯರ್ಪಣ ಮಾಡಬೇಕು. ಈ ನಿಟ್ಟಿನಲ್ಲಿ ಜನರಲ್ಲಿ ಭಕ್ತಿಸಿದ್ಧಾಂತದ ಜಾಗೃತಿ ಬಹಳ ಮುಖ್ಯ ಎಂದರು.

ಶಾಸಕ ಯಶ್ಪಾಲ್​ ಸುವರ್ಣ , ಮಾಜಿ ಶಾಸಕ ರುಪತಿ ಭಟ್​, ಪುತ್ತಿಗೆ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ವಿದ್ವಾನ್​ ನಿಟ್ಟೆ ಪ್ರಸನ್ನ ಆಚಾರ್ಯ, ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ, ಶಶಾಂಕ್​ ಭಟ್​, ಪುನೀತ್​ ಅತ್ತಾವರ, ನಗರ ಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್​, ಪೆರಂಪಳ್ಳಿ ವಾಸುದೇವ ಭಟ್​ ಮೊದಲಾದವರು ಉಪಸ್ಥಿತರಿದ್ದರು. ಕೃಷ್ಣರಾಜ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

ಜೋಡುಕಟ್ಟೆಯಿಂದ ಮೆರವಣಿಗೆ

ಜೋಡುಕಟ್ಟೆಯಿಂದ ಶ್ರೀ ಕೃಷ್ಣಮಠದ ವಾದ್ಯ , ಬ್ಯಾಂಡ್​ , ತಟ್ಟಿರಾಯ ಸಹಿತ ಸಾಂಪ್ರದಾಯಿಕ ಬಿರುದಾವಳಿಗಳು ಚಂಡೆವಾದನಗಳನ್ನೊಗೊಂಡ ಸರಳ ಮೆರವಣೆಗೆಯ ಮೂಲಕ ಕೆ.ಎಂ ಮಾರ್ಗ ಕನಕದಾಸ ರಸ್ತೆಯ ಮಾರ್ಗವಾಗಿ ರಥಬೀದಿಯ ಕನಕಗೋಪುರದ ಮುಂಭಾಗದವರೆಗೆ ರಾಮಭಕ್ತಿರಥವನ್ನು ಆದರಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net